

ಕೇಂದ್ರ ಸಚಿವರಿಗೆ ಕರೊನಾ ಕಂಟಕವಾಗಿ ಕಾಡುತ್ತಿದೆ. ಮೊದಲು ಕೊವಿಡ್-19 ಸೋಂಕು ಕಾಣಿಸಿಕೊಂಡಿದ್ದು ಗೃಹ ಸಚಿವ ಅಮಿತ್ ಷಾ ಅವರಲ್ಲಿ. ನಂತರ ಧರ್ಮೇಂದ್ರ ಪ್ರಧಾನ್ ಅವರಲ್ಲೂ ಸೋಂಕು ದೃಢಪಟ್ಟಿದೆ.
ಹಾಗೇ ಇಂದು ಇಬ್ಬರು ಕೇಂದ್ರ ಸಚಿವರಲ್ಲಿ ಕರೊನಾ ಇರುವುದು ಪತ್ತೆಯಾಗಿದ್ದು, ಅವರೇ ಟ್ವೀಟ್ ಮೂಲಕ ತಿಳಿಸಿದ್ದಾರೆ.ಇಂದು ಮಧ್ಯಾಹ್ಯ ಕೇಂದ್ರ ಕೃಷಿ ಸಚಿವಾಲಯದ ರಾಜ್ಯ ಸಚಿವ ಕೈಲಾಶ್ ಚೌಧರಿಯವರು ತಮಗೆ ಕೊವಿಡ್-19 ತಗುಲಿದ್ದಾಗಿ ಟ್ವೀಟ್ ಮಾಡಿದ್ದರು. ಹಾಗೇ ಅವರು ಜೋಧ್ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ಕೇಂದ್ರ ಜಲಸಂಪನ್ಮೂಲ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರಲ್ಲಿ ಸೋಂಕು ದೃಢಪಟ್ಟಿದ್ದು, ದೆಹಲಿಯ ಏಮ್ಸ್ಗೆ ದಾಖಲಾಗಿದೆ. ಇದನ್ನೂ ಓದಿ: ಬಾಲಿವುಡ್ ನಟ ಸಂಜಯ್ ದತ್ಗೆ ಅನಾರೋಗ್ಯ; ಐಸಿಯುನಲ್ಲಿ ಚಿಕಿತ್ಸೆ
ನನಗೆ ಕರೊನಾದ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡಿವೆ. ಮೊದಲೊಂದು ಬಾರಿ ತಪಾಸಣೆ ಮಾಡಿಸಿದಾಗ ವರದಿ ನೆಗೆಟಿವ್ ಎಂದು ಬಂದಿತ್ತು. ಹಾಗೇ ಎರಡನೇ ಬಾರಿ ಟೆಸ್ಟ್ನಲ್ಲಿ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಅರ್ಜುನ್ ಮೇಘ್ವಾಲ್ ಅವರು ಹೊಸಬಗೆಯ ಹಪ್ಪಳ ಭಾಭಿ ಜಿ ಪಾಪಡ್ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಇದನ್ನು ತಿಂದರೆ ದೇಹದಲ್ಲಿ ಪ್ರತಿಕಾಯಗಳು ಹೆಚ್ಚಿ, ಕರೊನಾ ವಿರುದ್ಧ ಹೋರಾಟ ಮಾಡುತ್ತವೆ ಎಂದೂ ಹೇಳಿ, ಸುದ್ದಿಯಾಗಿದ್ದರು. (ಏಜೆನ್ಸೀಸ್)