ದೇಶ ವಿರೋಧಿ ಘೋಷಣೆ ಕೂಗುವ ವಿದ್ಯಾರ್ಥಿಗಳನ್ನು ಕಂಬಿ ಹಿಂದೆ ಹಾಕಬೇಕೋ, ಬೇಡವೋ: ಗೃಹ ಸಚಿವ ಅಮಿತ್​ ಷಾ

Amit Shah vvani
Published on

ನವದೆಹಲಿ: ದೇಶ ವಿರೋಧಿ ಘೋಷಣೆ ಕೂಗುವ ವಿದ್ಯಾರ್ಥಿಗಳನ್ನು ಕಂಬಿ ಹಿಂದೆ ಹಾಕಬೇಕೋ, ಬೇಡವೋ..? ಆದರೆ ಇದಕ್ಕೆ ದೆಹಲಿ ಮುಖ್ಯಮಂತ್ರಿ ಅನುಮತಿ ನೀಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಆರೋಪಿಸಿದ್ದಾರೆ.

ದೆಹಲಿ ಚುನಾವಣೆ ಘೋಷಣೆ ಆಗುವ ಮುಂಚೆ ಆರೋಪ ಮಾಡಿರುವ ಅಮಿತ್​ ಷಾ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ವಿರುದ್ಧ ಕಿಡಿ ಕಾರಿದರು. ಅವರು ತುಕ್ಡೆ ತುಕ್ಡೆ ಗ್ಯಾಂಗ್​ನ್ನು ಬೆಂಬಲಿಸುತ್ತಿದ್ದಾರೆ ಎಂದರು.

ತನ್ನ ರಾಜಕೀಯ ಒತ್ತಾಸೆಗಾಗಿ ಆಯುಷ್ಮಾನ್​ ಭವ ಯೋಜನೆಯನ್ನು ಜಾರಿಗೊಳಿಸದ ಕೇಜ್ರಿವಾಲ್​, ಆ ಮೂಲಕ ಬಡವರಿಗೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಷಾ, ಜನರು ಇದನ್ನು ಗಮನಿಸುತ್ತಿದ್ದಾರೆ, ಕೇಜ್ರಿವಾಲ್​ ಅವರೇ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಮನೆಗೆ ಕಳುಹಿಸಲಿದ್ದಾರೆ ಎಂದರು.

ಕಾಂಗ್ರೆಸ್​ ವಿರುದ್ಧವೂ ಕಿಡಿಕಾರಿದ ಗೃಹ ಸಚಿವ, ದೇಶದ ಅಲ್ಪ ಸಂಖ್ಯಾತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಗಲಭೆಗಳಿಗೆ ನೀವೇ ಜವಾಬ್ದಾರರು ಎಂದು ಆಕ್ರೋಷ ವ್ಯಕ್ತಪಡಿಸಿದರು.

ಆಪ್​, ಕಾಂಗ್ರೆಸ್​ ಅದರಲ್ಲೂ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅಲ್ಪ ಸಂಖ್ಯಾತರನ್ನು ದಾರಿ ತಪ್ಪಿಸುತ್ತಿದ್ದಾರೆ. ಕಾಯ್ದೆ ಅನ್ವಯ ಯಾರ ಪೌರತ್ವವೂ ರದ್ದಾಗುವುದಿಲ್ಲ. ಬದಲಿಗೆ ಈ ಕಾಯ್ದೆಯಿಂದ ಪೌರತ್ವ ಸಿಗಲಿದೆ. ಈ ಪಕ್ಷಗಳೇ ದೇಶದಲ್ಲಿನ ಗಲಭೆಗಳಿಗೆ ಕಾರಣ ಎಂದು ಪುನರುಚ್ಚರಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net