

ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹ್ಮದ್ ಪಟೇಲ್ ನ. 25ರಂದು ವಿಧಿವಶರಾದರು.
ಫುಟ್ಬಾಲ್ ದಂತಕಥೆಯಂತಿದ್ದ ಅರ್ಜೆಂಟಿನಾದ ಡೀಗೊ ಮರಡೊನಾ ನ. 25ರಂದು ವಿಧಿವಶರಾದರು. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಮಾಜಿ ಸಂಸದ ಚೇತನ್ ಚವ್ಹಾಣ್ ಕರೊನಾದಿಂದಾಗಿ ಆ. 16ರಂದು ನಿಧನರಾದರು. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಕಾರ ಡೀನ್ ಜೋನ್ಸ್ (ಸೆ. 26), ಭಾರತದ ಹಾಕಿ ದಂತಕಥೆ ಬಲಬೀರ್ ಸಿಂಗ್ (ಮೇ 20), ಐದು ಬಾರಿಯ ಗ್ರ್ಯಾನ್ ಸ್ಲಾಮ್ ಡಬಲ್ಸ್ ವಿಜೇತ ಅಮೆರಿಕದ ಟೆನ್ನಿಸಿಗ ರಾಲ್ ಸ್ಟನ್ (ಡಿ. 6) ಸೇರಿದಂತೆ ಕೆಲವು ಪ್ರಮುಖರನ್ನು ಕ್ರೀಡಾಕ್ಷೇತ್ರ ಈ ವರ್ಷ ಕಳೆದುಕೊಂಡಿತು.
ವಿವಿಧ ಕ್ಷೇತ್ರಗಳ ಗಣ್ಯಮಾನ್ಯರಾದ ಎ. ಪಂಕಜಾ, ಶಾಂತಾ ದೇವಿ ಕಣವಿ, ಹೀ. ಚಿ. ಶಾಂತವೀರಯ್ಯ, ಟಿ. ಬಿ.ಸೊಲಬಕ್ಕನವರ್, ಚಂದ್ರಕಾಂತ ಕುಸನೂರ, ಬಿ. ಬಿ.ರಾಜಪುರೋಹಿತ, ಯು.ಪಿ.ಉಪಾಧ್ಯಾಯ, ಶ್ರೀನಿವಾಸ ಉಡುಪ, ಉದ್ಯಾವರ ಮಾಧವ ಆಚಾರ್ಯ, ವಿ.ಸಿ.ಐರಸಂಗ, ನಾ. ಸು. ಭರತನಹಳ್ಳಿ, ಹಾ. ಮೈ. ಸೂರಿ, ಬೇಲೂರು ಕೃಷ್ಣಮೂರ್ತಿ, ಕಪಿಲಾ ವಾತ್ಸ್ಯಾಯನ, ವಿಡಂಬಾರಿ, ಅಶೋಕ ಗಸ್ತಿ, ಮೋಹನ ಸೋನ, ಸುನೀಲ್ ಕೊಠಾರಿ, ಜಯದೇವಪ್ಪ ಜೈನಕೇರಿ, ಎನ್.ನಾರಾಯಣ ಶೆಟ್ಟಿ, ಬಿಳುಮನೆ ರಾಮದಾಸ್, ಪಾಟೀಲ ಪುಟ್ಟಪ್ಪ, ಅಚ್ಯುತನ್ ನಂಬೂದಿರಿ, ಸುಗತಕುಮಾರಿ ಟೀಚರ್, ಸೀತಾಲಕ್ಷ್ಮಿ ಕರ್ಕಿಕೋಡಿ, ಜಯಾ ಯಾಜಿ ಶಿರಾಲಿ, ಅಮರ್ ಸಿಂಗ್, ಸ್ವಾಮಿ ಅಗ್ನಿವೇಶ್, ಮೋತಿಲಾಲ್ ವೋರಾ ಲಾಲ್ ಜಿ ಟಂಡನ್ ಮೊದಲಾದವರನ್ನು ನಾಡು ಈ ವರ್ಷ ಕಳೆದುಕೊಂಡಿತು.
ಬರಹ: ರಾಜಶೇಖರ ಜೋಗಿನ್ಮನೆ, ರವೀಂದ್ರ ಮಾವಖಂಡ