ಸೋದರಳಿಯನ ಮದ್ವೆಯಲ್ಲಿ ಡ್ಯಾನ್ಸ್ ಮಾಡುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟ

uncledied
Published on

ರಾಜಸ್ಥಾನ: ಸೋದರಳಿಯನ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ನವಲಗಢ ಪ್ರದೇಶದ ಲೋಚ್ವಾದಲ್ಲಿ ಈ ಭೀಕರ ಘಟನೆ ನಡೆದಿದೆ.

ಕಮಲೇಶ್ ಮೃತನಾಗಿದ್ದಾನೆ. ಮೃತರು ನವಲಗಢದ ಅಗ್ಗದ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು, ಮನೆ ಮನೆಗೆ ಗ್ಯಾಸ್ ಸಿಲಿಂಡರ್ ವಿತರಿಸುತ್ತಿದ್ದರು. ಸೋದರಳಿಯ ಮದುವೆಯಲ್ಲಿ ಡಾನ್ಸ್​​ ಮಾಡುತ್ತಿದ್ದಾಗ ಹೃದಯಾಘಾತವಾಗಿ ಪ್ರಾಣ ಕಳೆದುಕೊಂಡಿದ್ದಾನೆ.

ರಾಜಸ್ಥಾನಿ ಸಂಪ್ರದಾಯದಂತೆ ಮದುವೆ ಸಮಾರಂಭದಲ್ಲಿ ತಲೆಯ ಮೇಲೆ ಮಡಕೆಯನ್ನು ಇಟ್ಟುಕೊಂಡು ಸಂತೋಷದಿಂದ ನೃತ್ಯ ಮಾಡುತ್ತಿದ್ದಾನೆ. ಡ್ಯಾನ್ಸ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನೆಲದ ಮೇಲೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. ಸಂತಸದಿಂದ ಕೂಡಿದ್ದ ಮದುವೆ ಸ್ಥಳದಲ್ಲಿ ದುಃಖದ ಛಾಯೆ ಆವರಿಸಿತ್ತು. ಅಂತ್ಯಕ್ರಿಯೆಯ ನಂತರ ಸೋದರಳಿಯನ ಮದುವೆಯನ್ನು ಸರಳವಾಗಿ ನಡೆಸಲಾಯಿತು.

ಕುಟುಂಬ ಸದಸ್ಯರ ಪ್ರಕಾರ, ಕಮಲೇಶ್ ಅವರು ನೃತ್ಯ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ಒಮ್ಮೆಲೇ ಕೆಳಗೆ ಬಿದ್ದು ಮತ್ತೆ ಮೇಲೇಳಲಾಗಲಿಲ್ಲ. ಆತ ತುಂಬಾ ಸಂತೋಷವಾಗಿದ್ದರು ಮತ್ತು ಯಾವಾಗಲೂ ನಗುತ್ತಾ, ನೃತ್ಯ ಮತ್ತು ಹಾಡುತ್ತಿದ್ದರು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net