ಹೊಟ್ಟೆ ನೋವು ತಾಳಲಾರದೆ ಪ್ರಾಣ ಬಿಟ್ಟ ವಿದ್ಯಾರ್ಥಿನಿ

stomach pain girl (1)
Published on

ಹಾವೇರಿ: ಕಿಡ್ನಿ ಸ್ಟೋನ್​​ನಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಕಾವ್ಯಾ ಪಾಟೀಲ್ (19) ಮೃತ ಯುವತಿಯಾಗಿದ್ದಾಳೆ. ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ಹೇಳಲಾಗಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನದೀಹರಳಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕಿಡ್ನಿಯಲ್ಲಿ ಸ್ಟೋನ್​​ಗಳಿದ್ದ ಕಾರಣ ಕಾವ್ಯಾ ಪಾಟೀಲ್ ಹೊಟ್ಟೆ ನೋವಿನಿಂದ ನರಳುತ್ತಿದ್ದಳು. ಈ ನೋವು ತಾಳಲಾರದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆಂದು ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಾರಪಟ್ಟಣಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಿಡ್ನಿ ಕಲ್ಲುಗಳು: ಕಿಡ್ನಿ ಕಲ್ಲುಗಳು ಜನರು ಎದುರಿಸುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ರಕ್ತದಲ್ಲಿನ ಖನಿಜಗಳು ಮೂತ್ರಪಿಂಡಗಳಲ್ಲಿ ಸ್ಫಟಿಕೀಕರಣಗೊಂಡಾಗ ಕಲ್ಲುಗಳು ಉಂಟಾಗುತ್ತವೆ. ಕಲ್ಲುಗಳು ಸಾಮಾನ್ಯವಾಗಿ ನೋವಿನಿಂದ ಕೂಡಿರುತ್ತವೆ ಮತ್ತು ಮೂತ್ರದಲ್ಲಿ ರಕ್ತವನ್ನು ಉಂಟುಮಾಡುತ್ತವೆ ಆದರೆ ಇತರ ಮೂತ್ರಪಿಂಡದ ಕಾಯಿಲೆಗಳಂತೆ ಹಾನಿಕಾರಕವಲ್ಲ. ಮೂತ್ರ ವಿಸರ್ಜನೆಯ ಸಮಯದಲ್ಲಿ ಕಲ್ಲುಗಳು ಸಾಮಾನ್ಯವಾಗಿ ಹೊರಬರುತ್ತವೆ ಆದರೆ ತುಂಬಾ ನೋವಿನಿಂದ ಕೂಡಿರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net