

ಶಿವಮೊಗ್ಗ: ಸಂಸ್ಕೃತ ಭಾರತೀ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ನಗರದ ಬಿ.ಬಿ.ರಸ್ತೆಯ ಸಂಸ್ಕೃತ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ 33ನೇ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಉಮ್ಮಚಗಿ ಶ್ರೀ ಮಾತಾ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿ ನಾಗರಾಜ ನಾರಾಯಣ ಭಟ್ಟ ಪ್ರಥಮ ಸ್ಥಾನ ಪಡೆದಿದ್ದಾರೆ.
ದೇಶದ ಆರ್ಥಿಕ ಸುಭದ್ರತೆಗೆ ಚಾಣಕ್ಯನ ಮಾರ್ಗೋಪಾಯಗಳು ವಿಚಾರವಾಗಿ ಸಂಸ್ಕೃತ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ್ದರು. ವಿಜೇತರಿಗೆ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂಸ್ಕೃತ ಭಾರತೀ ಜಿಲ್ಲಾ ಸಂಯೋಜಕ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಅಧ್ಯಕ್ಷ ಟಿ.ವಿ.ನರಸಿಂಹಮೂರ್ತಿ, ಸಂಸ್ಕೃತ ಭಾರತೀ ಜಿಲ್ಲಾಧ್ಯಕ್ಷ ಎನ್.ವಿ.ಶಂಕರನಾರಾಯಣ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು. ತರುಣೋದಯ ಸಂಸ್ಕೃ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್, ತೀರ್ಪುಗಾರರಾದ ಸೂರ್ಯ ಹೆಬ್ಬಾರ್, ಶಿವರಾಮ ಭಟ್ಟ, ಗುರುಮೂರ್ತಿ, ಸುವರ್ಣ ಉಪಸ್ಥಿತರಿದ್ದರು.
ಪ್ರಶಸ್ತಿ ವಿಜೇತರ ವಿವರ
*ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿ-ನಾಗರಾಜ ನಾರಾಯಣ ಭಟ್ಟ, ಶ್ರೀಮಾತಾ ಸಂಸ್ಕೃತ ಪಾಠಶಾಲೆ, ಉಮ್ಮಚಗಿ. (ಪ್ರಥಮ)
*ಸೀತಮ್ಮ ಹಾಗೂ ವಿದ್ವಾನ್ ವೆಂಕಟರಮಣ ಉಪಾದ್ಯ ಸ್ಮರಣಾರ್ಥ ಪ್ರಶಸ್ತಿ- ಎಂ.ಎಸ್.ಸುದರ್ಶನ, ರಾಜೀವ ಗಾಂಧಿ ಪರಿಸರ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯ, ಶೃಂಗೇರಿ (ದ್ವಿತೀಯ)
*ಅ.ನಾ.ಮಾಧವ ರಾವ್ ಸ್ಮರಣಾರ್ಥ ಪ್ರಶಸ್ತಿ- ಹರಿತ್ರ, ಭಾವಿ ಸಮೀರ ಗುರುಕುಲಂ, ಸೋಂದಾ (ತೃತೀಯ)
*ಕರಂಬಳ್ಳಿ ಕೃಷ್ಣ ಶೆಟ್ಟಿ ಪ್ರಾಯೋಜಕತ್ವ ಪ್ರಶಸ್ತಿ- ಸೋಮಶೇಖರ, ಕಾಲಭೈರವೇಶ್ವರ ಸಂಸ್ಕೃತ ವೇದ ಆಗಮ ಮಹಾವಿದ್ಯಾಲಯ, ಆದಿಚುಂಚನಗರಿ (ಚತುರ್ಥ)
*ವಾಗ್ದೇವಿ ಹಾಗೂ ಮಧುಕರ ಜೋಯಿಸ್ ಪ್ರಾಯೋಜಕತ್ವ ಪ್ರಶಸ್ತಿ- ಪ್ರಭಂಜನ, ಭಾವಿ ಸಮೀರ ಗುರುಕುಲಂ, ಸೋಂದಾ (5ನೇ ಸ್ಥಾನ)
*ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಭೀಮೇಶ್ವರ ಜೋಶಿ ಪ್ರಾಯೋಜಕತ್ವ ಪ್ರಶಸ್ತಿ- ಎ.ಅಂಜಲಿ, ಸೇಂಟ್ ಜೋಸ್ೆ ವಿದ್ಯಾಲಯ, ಬೆಂಗಳೂರು (6ನೇ ಸ್ಥಾನ)