53 ಜನರ ಸಾವಿಗೆ ಕಾರಣವಾದ ದೆಹಲಿ ಹಿಂಸಾಚಾರದ ಬಲೆಗೆ ಮಗನನ್ನೂ ಕೆಡವಿದ್ರು ಅಂತಿದ್ದಾರೆ ಖಾಲಿದ್ ತಂದೆ !

Umar Khalid and his father ilyas
Published on

ನವದೆಹಲಿ: ಐವತ್ತಮೂರು ಜನರ ಸಾವು ಮತ್ತು 400ಕ್ಕೂ ಹೆಚ್ಚು ಜನ ಗಾಯಗೊಳ್ಳುವುದಕ್ಕೆ ಕಾರಣವಾಗಿರುವ ಈಶಾನ್ಯ ದೆಹಲಿ ಹಿಂಸಾಚಾರದ ಪಿತೂರಿಯ ಕಾರಣಕ್ಕೆ ದೆಹಲಿ ಪೊಲೀಸರು ತುಕ್ಡೇ ತುಕ್ಡೇ ಗ್ಯಾಂಗ್​ನ ಉಮರ್ ಖಾಲಿದ್​ ನನ್ನು ಬಂಧಿಸಿದ್ರೆ, ಆತನ ತಂದೆ ಸೈಯದ್​ ಖಾಸಿಂ ರಸೂಲ್ ಇಲ್ಯಾಸ್ ಸ್ಟ್ಯಾಂಡ್ ವಿತ್ ಉಮರ್ ಖಾಲಿದ್ ಅಭಿಯಾನ ಶುರುಹಚ್ಚಿಕೊಂಡಿದ್ದಾರೆ!

ಮಧ್ಯರಾತ್ರಿ 12.52ಕ್ಕೆ ಈ ಸಂಬಂಧ ಟ್ವೀಟ್ ಮಾಡಿರುವ ಸೈಯದ್ ಖಾಸಿಂ ರಸೂಲ್ ಇಲ್ಯಾಸ್, ನನ್ನ ಮಗ ಉಮರ್ ಖಾಲಿದ್​ನನ್ನು ದೆಹಲಿ ಪೊಲೀಸ್​ ವಿಶೇಷ ಘಟಕ ಯುಎಪಿಎ ಪ್ರಕಾರ ರಾತ್ರಿ 11 ಗಂಟೆಗೆ ಬಂಧಿಸಿದೆ. ಮಧ್ಯಾಹ್ನ 1 ಗಂಟೆಯಿಂದ ನಿರಂತರವಾಗಿ ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆತನನ್ನು ದೆಹಲಿ ಗಲಭೆ ಕೇಸ್​ ಬಲೆಗೆ ಕೆಡವಲಾಗಿದೆ ಎಂದು ಬರೆದುಕೊಂಡಿದ್ದಾರೆ. ಇಲ್ಯಾಸ್ ವೆಲ್​ಫೇರ್ ಫಾರ್ಟಿ ಆಫ್ ಇಂಡಿಯಾದ ನ್ಯಾಷನಲ್ ಪ್ರೆಸಿಡೆಂಟ್​, ಆಲ್​ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಕಾರ್ಯಕಾರಿ ಸಮಿತಿ ಸದಸ್ಯ, ಅಫ್ಕರ್​ ಏ ಮಿಲ್ಲಿಯ ಸಂಪಾದಕ.

ನಿನ್ನೆಯಷ್ಟೇ ದೆಹಲಿ ಪೊಲೀಸರು ಸಲ್ಲಿಸಿದ ಪೂರಕ ಚಾರ್ಜ್​ಶೀಟ್​ನಲ್ಲಿ ಸಿಪಿಐ(ಎಂ) ಜನರಲ್ ಸೆಕ್ರೆಟರಿ ಸೀತಾರಾಂ ಯೆಚೂರಿ, ಸ್ವರಾಜ್ ಅಭಿಯಾನದ ನಾಯಕ ಯೋಗೇಂದ್ರ ಯಾದವ್ ಮತ್ತು ಇತರರ ಹೆಸರನ್ನು ಉಲ್ಲೇಖಿಸಿದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹಣಕಾಸು ಮತ್ತು ಸೌಲಭ್ಯದ ನೆರವಿನೊಂದಿಗೆ ದೆಹಲಿ ಗಲಭೆ ಪ್ರಾಯೋಜಿತವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಸಂದರ್ಭದಲ್ಲೇ ಹಿಂಸಚಾರ ಎಸಗುವುದಕ್ಕೆ ತಾಹಿರ್ ಹುಸೇನ್ ಮತ್ತು ಉಮರ್ ಖಾಲಿದ್ ಸಂಚು ರೂಪಿಸಿದ್ದರು ಎಂಬ ಅಂಶವನ್ನು ದೆಹಲಿ ಪೊಲೀಸರು ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net