ಯೂಕ್ರೇನ್​ಗೆ ಶಸ್ತ್ರಾಸ್ತ್ರ ಕಳುಹಿಸುವ ಒಪ್ಪಂದ ಘೋಷಿಸಿದ ಅಮೆರಿಕ: ಥ್ಯಾಂಕ್ಸ್​ ಎಂದ ಝೆಲೆನ್ಸ್ಕಿ​! Volodymyr Zelenskyy

Volodymyr Zelenskyy
Published on

Volodymyr Zelenskyy : ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ( Donald Trump ) ​ಅವರ ಜೊತೆ ಉತ್ತಮ ಮಾತುಕತೆ ನಡೆಸಿದ್ದೇನೆ ಎಂದು ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಮಂಗಳವಾರ (ಜು.15) ಹೇಳಿದರು.

ನ್ಯಾಟೋ ಮೈತ್ರಿ ಮೂಲಕ ಯೂಕ್ರೇನ್​ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ವಾಷಿಂಗ್ಟನ್​ ಡಿಸಿ ಒಪ್ಪಂದವನ್ನು ಟ್ರಂಪ್​ ಮತ್ತು ನ್ಯಾಟೋ ಮುಖ್ಯಸ್ಥ ಮಾರ್ಕ್​ ರುಟ್ಟೆ ಘೋಷಣೆ ಮಾಡಿದ ಬೆನ್ನಲ್ಲೇ ಝೆಲೆನ್ಸ್ಕಿ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಉಭಯ ನಾಯಕರು ಹತ್ಯೆಗಳನ್ನು ನಿಲ್ಲಿಸಲು ಮತ್ತು ಶಾಶ್ವತ ಮತ್ತು ನ್ಯಾಯಯುತ ಶಾಂತಿಯನ್ನು ಸ್ಥಾಪಿಸಲು ಒಟ್ಟಾಗಿ ಕೆಲಸ ಮಾಡುವ ಮಾರ್ಗಗಳ ಬಗ್ಗೆ ಚರ್ಚಿಸಿದೆವು ಎಂದು ಝೆಲೆನ್ಸ್ಕಿ ತಮ್ಮ ಎಕ್ಸ್​ ಖಾತೆಯಲ್ಲಿ ತಿಳಿಸಿದ್ದಾರೆ.

ನಾನಿಂದು ಪೋಟಸ್​ (ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರು)​ ಜೊತೆ ಮಾತನಾಡಿದೆ. ಇದು ಉತ್ತಮ ಸಂಭಾಷಣೆ ಆಗಿತ್ತು. ಉಕ್ರೇನ್ ಬೆಂಬಲಿಸುವ ನಿಮ್ಮ ಇಚ್ಛೆಗೆ ಮತ್ತು ಹತ್ಯೆಗಳನ್ನು ನಿಲ್ಲಿಸಲು ಮತ್ತು ಶಾಶ್ವತ ಮತ್ತು ನ್ಯಾಯಯುತ ಶಾಂತಿಯನ್ನು ಸ್ಥಾಪಿಸಲು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸಿದ್ದಕ್ಕಾಗಿ ಧನ್ಯವಾದಗಳು ಎಂದು ಝೆಲೆನ್ಸ್ಕಿ ಬರೆದುಕೊಂಡಿದ್ದಾರೆ.

ಇದಲ್ಲದೆ, ಯೂಕ್ರೇನಿಯನ್​ ನಾಗರಿಕರನ್ನು ರಕ್ಷಿಸಲು ರಷ್ಯಾದ ಮಿಲಿಟರಿ ಕ್ರಮಗಳನ್ನು ಪ್ರತಿರೋಧವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಪರಿಹಾರಗಳನ್ನು ಗುರುತಿಸುವುದರ ಮೇಲೆ ಚರ್ಚೆ ಕೇಂದ್ರಿಕರಿಸಿದೆ ಎಂದು ಹೇಳಿದರು. ರಷ್ಯಾದ ದಾಳಿಯಿಂದ ಜನರಿಗೆ ಉತ್ತಮ ರಕ್ಷಣೆ ನೀಡಲು ಮತ್ತು ನಮ್ಮ ಸ್ಥಾನವನ್ನು ಬಲಪಡಿಸಲು ಅಗತ್ಯವಾದ ವಿಧಾನಗಳು ಹಾಗೂ ಪರಿಹಾರಗಳ ಬಗ್ಗೆ ಟ್ರಂಪ್​ ಜೊತೆ ಚರ್ಚಿಸಿದ್ದೇವೆ ಎಂದು ತಿಳಿಸಿದರು.

ನಾವು ಸಾಧ್ಯವಾದಷ್ಟು ಶಾಂತಿ ಸ್ಥಾಪಿಸಲು ಕೆಲಸ ಮಾಡಲು ಸಿದ್ದರಿದ್ದೇವೆ ಎಂದು ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net