ಗುರುಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಪ್ರಾಪ್ತ; ಉಜ್ಜಯಿನಿ ಶ್ರೀ

6-RNR-07
Published on

ರಾಣೆಬೆನ್ನೂರ: ಭಗವಂತ ಕೊಟ್ಟ ಈ ಬದುಕು ಸಾರ್ಥಕವಾಗಬೇಕಾದರೆ ಧರ್ಮಾಚರಣೆ ಅವಶ್ಯಕ. ಬದುಕಿನ ಉನ್ನತಿಗೆ ಆಧ್ಯಾತ್ಮದ ಅರಿವು ಮುಖ್ಯ. ಆಷಾಡ ಮಾಸದಲ್ಲಿ ಗುರುವಿನ ಪೂಜೆಯನ್ನು ಮಾಡಿದರೆ ಹೆಚ್ಚು ಫಲ ಸಿಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಗುರು-ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಪ್ರಾಪ್ತವಾಗುತ್ತದೆ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಚನ್ನೇಶ್ವರಮಠದ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಆಷಾಢ ಮಾಸದ ಇಷ್ಟಲಿಂಗ ಪೂಜೆ ಮತ್ತು ಜನಜಾಗೃತಿ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನಿತ್ಯವೂ ಇಷ್ಟಲಿಂಗ ಪೂಜೆ ಮಾಡುವುದರಿಂದ ಸರ್ವ ಸಂಕಷ್ಟಗಳು ನಿವಾರಣೆಯಾಗಿ ಇಷ್ಟಾರ್ಥಗಳು ನೆರವೇರುತ್ತವೆ. ಇಷ್ಟಲಿಂಗಂ ಇದಂ ಸಾಕ್ಷಾತ್​ ಅನಿಷ್ಟ ಪರಿಹಾರಕಂ ಎಂಬ ಉಕ್ತಿಗನುಸಾರವಾಗಿ ಇಷ್ಟಲಿಂಗದಲ್ಲಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿವ ಶಕ್ತಿ ಇದೆ. ಅದನ್ನು ಯಾವಾಗಲೂ ದೇಹದ ಮೇಲೆ ಧರಿಸಿ ನಿತ್ಯವೂ ಪೂಜಿಸಬೇಕು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿರೇಶ ಮೋಟಗಿ ಧರ್ಮಸಭೆ ಉದ್ಘಾಟಿಸಿದರು. ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ದಾವಣಗೆರೆ ಆವರಗೊಳ್ಳ ಪುರವರ್ಗಮಠದ ಓಂಕಾರ ಸ್ವಾಮೀಜಿ, ಕೊಡಿಯಾಲ ಹೊಸಪೇಟೆ ಪುಣ್ಯಕೋಟಿಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ದಿಂಡದಹಳ್ಳಿ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮಣಕೂರ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ನಗರಸಭೆ ಅಧ್ಯೆ ಚಂಪಕ್ಕ ಬಿಸಲಹಳ್ಳಿ, ಸದಸ್ಯೆ ಸುಮಂಗಲಾ ಪಾಟೀಲ, ರಾಜಶೇಖರ ಅಜ್ಯೋಡಿಮಠ, ಬಿ.ಎಸ್​. ಪಟ್ಟಣಶೆಟ್ಟಿ, ವೀರಣ್ಣ ತೊಗಸಿರ್ಮಳೇಮಠ, ಫಕ್ಕೀರೇಶ ಭಸ್ಮಾಂಗಿಮಠ, ಕರಬಸಪ್ಪ ಮಾಕನೂರ, ಜಗದೀಶ ಅಜ್ಯೋಡಿಮಠ, ಅಮೃತಗೌಡ ಪಾಟೀಲ, ಗಾಯತ್ರಮ್ಮ ಕುರುವತ್ತಿ, ರಾಜಶೇಖರ ತಿಳುವಳ್ಳಿ, ಸುನಂದಮ್ಮ ತಿಳವಳ್ಳಿ, ಪ್ರೊ.ಎಸ್​.ವಿ. ಉಜ್ಜನಿಮಠ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net