ಡಿಸಿ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ

Published on

ಉಡುಪಿ: ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಸಲ್ಲಿಸುವ ಹಾವಳಿ ಹೆಚ್ಚಾಗುತ್ತಿದ್ದು, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ನಕಲಿ ಖಾತೆಯಿಂದ ಅನೇಕ ಮಂದಿಗೆ 7 ಸಾವಿರ ರೂ. ಪಾವತಿಸುವಂತೆ ಖದೀಮರು ಸಂದೇಶ ಕಳುಹಿಸಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ, ನನ್ನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ್ದಾರೆ. ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದೇನೆ. ಯಾರೂ ಹಣ ಹಾಕಬೇಡಿ ಎಂದು ವಿನಂತಿಸಿದ್ದಾರೆ.

ಜಿಲ್ಲಾಧಿಕಾರಿ ವೈಯಕ್ತಿಕ ಖಾತೆ ಜಿ ಜಗದೀಶ್ ಮಳಲಗಡ್ಡೆ ಎಂಬ ಹೆಸರಿನ ನಕಲಿ ಖಾತೆಯಿಂದ ಸಂದೇಶಗಳನ್ನು ಕಳುಹಿಸಲಾಗಿದ್ದು, ನಿಮ್ಮಲ್ಲಿ ಫೋನ್ ಪೇ ಇದೆಯೇ? ನನಗೆ ತುರ್ತಾಗಿ 7 ಸಾವಿರ ರೂ. ಕಳುಹಿಸಬಹುದೇ? 3 ಗಂಟೆಯಲ್ಲಿ ವಾಪಾಸು ಕೊಡುತ್ತೇನೆ. ನನ್ನ ಸಂಬಂಧಿಕರ ಸಂಖ್ಯೆ 8948021089 ಇದಕ್ಕೆ ಹಣ ಜಮೆ ಮಾಡಿ ಎಂಬುದಾಗಿ ಮೆಸೆಜ್ ಕಳುಹಿಸಲಾಗಿದೆ. ಸಂದೇಶ ಪಡೆದ ವ್ಯಕ್ತಿಯೊಬ್ಬರು ನಾನು ಡಿಸಿ ಕಚೇರಿ ಬಳಿ ಇದ್ದೇನೆ, ನಗದು ಹಣ ಕೊಡುತ್ತೇನೆ ಎಂದು ತಿಳಿಸಿದ್ದು, ನಿಮ್ಮ ಖಾತೆಯಲ್ಲಿ ಹಣವೆಷ್ಟಿದೆ ಎಂದು ಆತ ಮರುಪ್ರಶ್ನೆಹಾಕಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net