ಉಡುಪಿ ಕೊಚ್ಚಿನ್​ ಶಿಪ್​ಯಾರ್ಡ್​ನಲ್ಲಿ​ ವಿವಿಧ ಹುದ್ದೆಗಳು

udupi
Published on

ಬೆಂಗಳೂರು:  ಕೇಂದ್ರ ಬಂದರು, ಹಡಗು ಹಾಗೂ ಜಲಮಾರ್ಗದ ಅಡಿಯಲ್ಲಿ ಕೊಚ್ಚಿನ್​ ಶಿಪ್​ಯಾರ್ಡ್​ (ಸಿಎಸ್‌ಎಲ್) ಕಾರ್ಯನಿರ್ವಹಿಸುತ್ತಿದ್ದು, ಉಡುಪಿ ಕೊಚ್ಚಿನ್​ ಶಿಪ್​ಯಾರ್ಡ್​ ಅದರ ಅಂಗಸಂಸ್ಥೆಯಾಗಿದೆ. 2022ರಲ್ಲಿ ಟೆಬ್ಮಾಶಿಪ್ ಯಾರ್ಡ್ ಲಿಮೆಟೆಡ್ ನಿಂದ ಉಡುಪಿ ಕೊಚ್ಚಿನ್​ ಶಿಪ್​ಯಾರ್ಡ್​ ಲಿಮಿಟೆಡ್ ಎಂದು ಮರುನಾಮಕರಣಗೊಂಡಿತು. ಹಡಗು ನಿರ್ಮಾಣ ಹಾಗೂ ನಿರ್ವಹಣೆ ಇದರ ಪ್ರಮುಖ ಕಾರ್ಯವಾಗಿದೆ. ಪ್ರಸ್ತುತ ಈ ಸಂಸ್ಥೆಯು ವಿವಿಧ ಹುದ್ದೆಗಳ ನೇಮಕಾತಿಗಾಗಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು ಹುದ್ದೆಗಳು 58

ಹುದ್ದೆಗಳ ವಿವರ
ಸೂಪರ್‌ವೈಸರ್ 18
ಆಫೀಸ್ ಅಸಿಸ್ಟೆಂಟ್, ಬೂತ್ ಆಪರೇಟರ್ಸ್‌ 16
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ 02
ಸೀನಿಯರ್ ಮ್ಯಾನೇಜರ್ 01
ಮ್ಯಾನೇಜರ್ 08
ಡೆಪ್ಯೂಟಿ ಮ್ಯಾನೇಜರ್ 01
ಅಸಿಸ್ಟೆಂಟ್ ಮ್ಯಾನೇಜರ್ 12

ವಿದ್ಯಾರ್ಹತೆ
ಮ್ಯಾನ್ಯತೆ ಪಡೆದ ವಿವಿ ಅಥವಾ ಶಿಕ್ಷಣ ಮಂಡಳಿಯಿಂದ ಹುದ್ದೆಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ/ಡಿಪ್ಲೊಮಾ/ಐಟಿಐ/ಪದವಿ/ಸ್ನಾತಕೋತ್ತರ ಪದವಿ/ಚಾರ್ಟ್‌ಡ್ ಅಕೌಂಟೆಂಟ್/ಕಾಸ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು. ಹುದ್ದೆಗೆ ಸಂಬಂಧಿತ ವಿಷಯದಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ.

ವಯೋಮಿತಿ, ವೇತನ
ಹುದ್ದೆಗೆ ಅನುಗುಣವಾಗಿ ಅಭ್ಯರ್ಥಿಯ ವಯಸ್ಸು ಕನಿಷ್ಠ 30ರಿಂದ ಗರಿಷ್ಠ 45 ವರ್ಷದೊಳಗಿರಬೇಕು. ಸೂಪರ್‌ವೈಸರ್/ ಬೂತ್ ಆಪರೇಟರ್/ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ 18,000ರೂ.-40,650ರೂ., ಇತರ ಹುದ್ದೆಗಳಿಗೆ 73,280ರೂ.-1,46,560ರೂ. ವೇತನ ನಿಗದಿಯಾಗಿದೆ.

ಆಯ್ಕೆ ಹೀಗೆ...
ಸೂಪರ್‌ವೈಸರ್-ಪವರ್ ಪಾಯಿಂಟ್ ಪ್ರೆಸೆಂಟೆಷನ್/ಸಂದರ್ಶನದ ಬೂತ್ ಆಪರೇಟರ್/ಆಫೀಸ್ ಅಸಿಸ್ಟೆಂಟ್-ಲಿಖಿತ ಪರೀಕ್ಷೆ

ಅರ್ಜಿ ಸಲ್ಲಿಕೆ/ಹೆಚ್ಚಿನ ಮಾಹಿತಿ
udupicsl.com

ಅರ್ಜಿ ಸಲ್ಲಿಕೆಗೆ ಅಂತಿಮ ದಿನ
ಸೂಪರ್‌ವೈಸರ್, ಆಫೀಸ್ ಅಸಿಸ್ಟೆಂಟ್, ಬೂತ್ ಆಪರೇಟರ್ಸ್‌ - 10.10.2023
ಇತರ ಹುದ್ದೆಗಳಿಗೆ - 08.10.2023

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net