ಕಾರು-ಬಸ್ಸು ನಡುವೆ ಭೀಕರ ಅಪಘಾತ; ಉಡುಪಿ ಮೂಲದ ಇಬ್ಬರು ಸಾವು

Udupi
Published on

ಉಡುಪಿ: ಬಸ್ಸು ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಶಿಕ್ಷಕ ಹಾಗೂ ಪ್ರಥಮ ದರ್ಜೆ ಸಹಾಯಕ ಸಾವನ್ನಪ್ಪಿರುವ ಘಟನೆ ಹೆಬ್ರಿ ಠಾಣಾ ವ್ಯಾಪ್ತಿಯ ಸೋಮೇಶ್ವರ ಬಳಿಯ ಸೀತಾನದಿ ಜಕ್ಕನಮಕ್ಕಿ ಎಂಬಲ್ಲಿ ನಡೆದಿದೆ.

ಉಡುಪಿ ಡಿಡಿಪಿಐ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ಬಣ್ಣ ಗಾಣಿಗ ಹಾಗೂ ಉಡುಪಿ ಇಂದಿರಾ ನಗರ ಶಾಲೆಯ ದೈಹಿಕ ಶಿಕ್ಷಕ ಸೋಮ ಶೇಖರ್ ಮೃತರು. ಗಂಭೀರ ಗಾಯಗೊಂಡ ಶಿಕ್ಷಕ ಸುದರ್ಶನ ಹಾಗೂ ಕಾರು ಚಲಾಯಿಸುತ್ತಿದ್ದ ಸತೀಶ್ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಡುಪಿಯಿಂದ ಆಗುಂಬೆಗೆ ಹೋಗುತ್ತಿದ್ದ ಬಸ್​ಗೆ ಅಭಿಮುಖವಾಗಿ ಕಾರು ಬಂದು ಡಿಕ್ಕಿ ಹೊಡೆದಿದೆ. ಚೆನ್ನಗಿರಿಯಲ್ಲಿ ಮದುವೆ ಮುಗಿಸಿಕೊಂಡು ಮೂವರು ಉಡುಪಿಗೆ ಹಿಂತಿರುಗುತ್ತಿದ್ದರು. ಈ ಘಟನೆ ನಡೆದಿದ್ದು, ಅಪಘಾತದ ತೀವ್ರತೆಗೆ ಬಸ್​ನ ಒಳಗೆ ಕಾರು ಸಿಲುಕಿಕೊಂಡಿದೆ. ಕಾರನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net