ಉದಯಪುರ ಹತ್ಯೆ ಪ್ರಕರಣ: 10 ದಿನಗಳ ಕಾಲ ಆರೋಪಿಗಳು ಎನ್​ಐಎ ವಶಕ್ಕೆ

udaipurmurder
Published on

ಜೈಪುರ: ಟೈಲರ್​ ಕನ್ಹಯ್ಯ ಲಾಲ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರದ ನ್ಯಾಯಾಲಯ ಬಂಧಿತ ಎಲ್ಲಾ ಆರೋಪಿಗಳಿಗೆ 10 ದಿನಗಳ ಕಾಲ ಎನ್​ಐಎ ವಶಕ್ಕೆ ನೀಡಲಾಗಿದೆ.

ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ರಾಷ್ಟ್ರೀಯ ತನಿಖಾ ದಳ ಹಾಗೂ ಭಯೋತ್ಪಾದನ ನಿಗ್ರಹ ಪಡೆಯಿಂದ ಇನ್ನೂ 10 ದಿನಗಳ ಕಾಲ ಆರೋಪಿಗಳ ವಿಚಾರಣೆ ನಡೆಯಲಿದೆ.ಆರೋಪಿಗಳಾದ ರಿಯಾಜ್​ ಅಖ್ತೇರಿ, ಘೌಸ್​ ಮೊಹಮ್ಮದ್​, ಆಸಿಫ್​ ಮತ್ತು ಮೊಹಸೀನ್​​ ಈ ನಾಲ್ವರನ್ನು ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.


ಸದ್ಯ ಪ್ರಕರಣದಲ್ಲಿ ಎನ್​ಐಎ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದು, ತನಿಖೆ ವೇಳೆ ಬಂಧಿತರಿಂದ ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ನೂಪುರ್​ ಶರ್ಮಾ ಹೇಳಿಕೆ ಬೆಂಬಲಿಸಿದ್ದ ಉದಯಪುರದ ಟೈಲರ್​ ಕನ್ಹಯ್ಯ ಲಾಲ್ ಅವರನ್ನು ಜೂನ್​ 28 ರಂದು ನಡುರಸ್ತೆಯಲ್ಲಿ ಕತ್ತು ಸೀಳಿ ಭೀಕರ ಹತ್ಯೆ ಮಾಡಲಾಗಿತ್ತು. ಸದ್ಯ ಆರೋಪಿಗಳ ಬಂಧನವಾಗಿದ್ದು, ತನಿಖೆ ಚುರುಕುಗೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net