ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ ಸಿರಿಯಾದಲ್ಲಿ ಅಮೆರಿಕ ವೈಮಾನಿಕ ದಾಳಿ

america
Published on

ವಾಷಿಂಗ್ಟನ್: ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ, ಅಮೆರಿಕ ಸೇನೆಯು ಇಂದು ಬೆಳಗ್ಗೆ ಪೂರ್ವ ಸಿರಿಯಾದಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ಗೆ ಸಂಬಂಧಿಸಿದ ಎರಡು ಸ್ಥಳಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಅಮೆರಿಕ ಸಿಬ್ಬಂದಿಗಳ ವಿರುದ್ಧ ಇತ್ತೀಚಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳಿಗೆ ಈ ದಾಳಿಗಳು ಪ್ರತಿಕ್ರಿಯೆಯಾಗಿದೆ ಎಂದು ಪೆಂಟಗನ್ ಹೇಳಿದೆ. ಕಳೆದ ವಾರ ಸಿರಿಯಾದಲ್ಲಿ ಅಮೆರಿಕದ ಸೈನಿಕರ ಮೇಲೆ ದಾಳಿ ನಡೆಸಲಾಗಿತ್ತು.

ಅಮೇರಿಕ ಸೈನಿಕರ ಮೇಲಿನ ದಾಳಿಗೆ ಪ್ರತೀಕಾರ

ಅಕ್ಟೋಬರ್ 17 ರಿಂದ ಇರಾಕ್‌ನಲ್ಲಿ ಅಮೆರಿಕ ಗುರಿಗಳು ಮತ್ತು ಪಡೆಗಳ ಮೇಲೆ ಕನಿಷ್ಠ 12 ದಾಳಿಗಳು ಮತ್ತು ಸಿರಿಯಾದಲ್ಲಿ ನಾಲ್ಕು ದಾಳಿಗಳು ನಡೆದಿವೆ ಎಂದು ಪೆಂಟಗನ್ ತಿಳಿಸಿದೆ. ಇರಾಕ್‌ನ ಅಲ್-ಅಸಾದ್ ವಾಯುನೆಲೆ ಮತ್ತು ಸಿರಿಯಾದಲ್ಲಿನ ಅಲ್-ಟಾನ್ಫ್ ಗ್ಯಾರಿಸನ್‌ಗಳನ್ನು ಗುರಿಯಾಗಿಸಲು ಡ್ರೋನ್‌ಗಳನ್ನು ಬಳಸಿದ ಎರಡು ದಾಳಿಗಳಲ್ಲಿ 21 ಅಮೆರಿಕ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಏರ್ ಫೋರ್ಸ್ ಬ್ರಿಗೇಡಿಯರ್ ಜನರಲ್ ಪ್ಯಾಟ್ ರೈಡರ್ ಹೇಳಿದ್ದಾರೆ.

ಹಮಾಸ್ ವಿರುದ್ಧ ಇಸ್ರೇಲ್‌ನ ಯುದ್ಧದಿಂದ ಸಂಭಾವ್ಯ ದಾಳಿಯನ್ನು ತಡೆಯಲು ಅಮೆರಿಕ ಆಕ್ರಮಣಕಾರಿಯಾಗಿ ಇರಾನ್ ಬೆಂಬಲಿತ ಗುಂಪುಗಳ ಮೇಲೆ ದಾಳಿ ಮಾಡುತ್ತಿದೆ.

ಸ್ವರಕ್ಷಣೆಗಾಗಿ ವೈಮಾನಿಕ ದಾಳಿ : ಲಾಯ್ಡ್ ಆಸ್ಟಿನ್

ಸಿರಿಯಾ ಮೇಲಿನ ಈ ದಾಳಿಯ ಬಗ್ಗೆ, ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ. ಆಸ್ಟಿನ್ III ರ ಹೇಳಿಕೆ ಕೂಡ ಬಂದಿದೆ. "ಇಂದು, ಅಮೆರಿಕ ಮಿಲಿಟರಿ ಪಡೆಗಳು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮತ್ತು ಪೂರ್ವ ಸಿರಿಯಾದಲ್ಲಿ ಅದರ ಅಂಗಸಂಸ್ಥೆಗಳ ವಿರುದ್ಧ ಸ್ವಯಂ-ರಕ್ಷಣಾ ದಾಳಿಗಳನ್ನು ನಡೆಸಿತು'' ಎಂದವರು ಹೇಳಿದ್ದಾರೆ.

ಇರಾನ್ ಬೆಂಬಲಿತ ಸೇನಾ ಗುಂಪುಗಳಿಂದ ದಾಳಿ

ಅಕ್ಟೋಬರ್ 17 ರಂದು ಇರಾನ್ ಬೆಂಬಲಿತ ಮಿಲಿಷಿಯಾ ಗುಂಪುಗಳು ಇರಾಕ್ ಮತ್ತು ಸಿರಿಯಾದಲ್ಲಿ ಅಮೆರಿಕ ಪಡೆಗಳ ಮೇಲೆ ದಾಳಿ ಮಾಡಿದೆ ಎಂದು ಅಮರಿಕ ಆರೋಪಿಸಿದೆ. ಈ ದಾಳಿಯ ಪರಿಣಾಮವಾಗಿ, ಒರ್ವ ಅಮೆರಿಕ ನಾಗರಿಕ ಸಾವನ್ನಪ್ಪಿದ್ದು, 21 ಅಮೆರಿಕ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾದವು, ಆದರೆ ಗಾಯಗೊಂಡವರೆಲ್ಲರೂ ಕರ್ತವ್ಯಕ್ಕೆ ಹಿಂತಿರುಗಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net