ನದಿಗೆ ಸ್ನಾನಕ್ಕೆ ತೆರಳಿದ್ದ ಯುವಕರಿಬ್ಬರು ನಿರುಪಾಲು

12.npk-2
ನಾಪೋಕ್ಲುವಿನ ಎಮ್ಮೆಮಾಡು ಕೂರುಳಿ ಬಳಿಯ ಕಡಿಯತ್ತೂರು ದೋಣಿ ಕಡುವಿನ ಕಾವೇರಿ ನದಿಯಲ್ಲಿ ಯುವಕರಿಬ್ಬರು ನಿರುಪಾಲಾದ ಸ್ಥಳದಲ್ಲಿ ಶವಕ್ಕಾಗಿ ಶೋಧ ನಡೆಸುತ್ತಿರುವುದು.
Published on

ನಾಪೋಕ್ಲು: ಇಲ್ಲಿನ ಕಡಿಯತ್ತೂರು ದೋಣಿ ಕಡುವಿನ ಕಾವೇರಿ ನದಿಗೆ ಸ್ನಾನಕ್ಕೆಂದು ನೀರಿಗಿಳಿದ ಯುವಕರಿಬ್ಬರು ಸೋಮವಾರ ನಿರುಪಾಲಾಗಿದ್ದಾರೆ.

ಚೇರಂಬಾಣೆ ಬಳಿಯ ಪಾಕ ನಿವಾಸಿ ವಿಠಲ ಅವರ ಪುತ್ರ ಅಯ್ಯಪ್ಪ (18), ಐವತ್ತೋಕ್ಲು ಗ್ರಾಮದ ಚಾರಂಡ ಕಾಲನಿ ನಿವಾಸಿ ಪರಮೇಶ ಮತ್ತು ವಿಮಲಾ ದಂಪತಿ ಪುತ್ರ ಗಿರೀಶ್ (16) ಮೃತರು.

ಎಮ್ಮೆಮಾಡು ಕೂರುಳಿ ಬಳಿಯ ಕಡಿಯತ್ತೂರು ದೋಣಿ ಕಡುವು ಎಂಬಲ್ಲಿ ಸ್ನೇಹಿತರೊಂದಿಗೆ ಕಾವೇರಿ ನದಿಗೆ ಈಜಲು ತೆರಳಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆ ಹಾಗೂ ಗೃಹರಕ್ಷಕ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಗಿರೀಶ್ ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದು, ಅಯ್ಯಪ್ಪನ ಮೃತದೇಹಕ್ಕಾಗಿ ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಇಲ್ಲಿಯ ಪೊಲೀಸ್ ಠಾಣಾಧಿಕಾರಿ ಮಂಜುನಾಥ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕೇಸು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net