

Mysteriously: ಎರಡು ಬಾರಿಯ ಆಸ್ಕರ್ ಪ್ರಶಸ್ತಿ ವಿಜೇತ, ಹಾಲಿವುಡ್ ನಟ ಜೀನ್ ಹ್ಯಾಕ್ಮ್ಯಾನ್(Gene Hackman), ಅವರ ಪತ್ನಿ ಬೆಟ್ಸಿ ಮತ್ತು ಮನೆಯಲ್ಲಿದ್ದ ಸಾಕು ನಾಯಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಗುರುವಾರ(ಫೆ.27) ವರದಿಯಾಗಿದೆ.
ಮೆಲ್ನೋಟಕ್ಕೆ ಯಾವುದೇ ಅನುಮಾನಸ್ಪದ ಶಂಕೆ ವ್ಯಕ್ತವಾಗುತ್ತಿಲ್ಲ. ಆದರೆ, ಸಾವಿಗೆ ನಿಕರಕಾರಣ ತಿಳಿಯುತ್ತಿಲ್ಲವಾದರೂ ತನಿಖೆ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದು ಪೋಲಿಸರು ತಿಳಿಸಿದ್ದಾರೆ. ನಟನಿಗೆ 95 ವರ್ಷ ಮತ್ತು ಪತ್ನಿ ಬೆಟ್ಸ್ಗೆ 63 ವರ್ಷ ಇರುವುದಾಗಿ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿವೆ.
ಹ್ಯಾಕ್‌ಮನ್ ಅವರ ಇತರ ಗೌರವಾನ್ವಿತ ಕೃತಿಗಳಲ್ಲಿ 'ದಿ ಫ್ರೆಂಚ್ ಕನೆಕ್ಷನ್' ಮತ್ತು 'ದಿ ರಾಯಲ್ ಟೆನೆನ್‌ಬಾಮ್ಸ್' ಸೇರಿವೆ. ಅವರ ಪ್ರಸಿದ್ಧ ವೃತ್ತಿಜೀವನದಲ್ಲಿ ಎರಡು ಬಾರಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಲ್ಲದೆ, ಅವರು ನಾಲ್ಕು ಗೋಲ್ಡನ್ ಗ್ಲೋಬ್‌ಗಳು ಮತ್ತು ಎರಡು BAFTA ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹ್ಯಾಕ್‌ಮನ್ 'ಸೂಪರ್‌ಮ್ಯಾನ್' (1978) ಮತ್ತು 'ಸೂಪರ್‌ಮ್ಯಾನ್ II' (1980) ಚಿತ್ರಗಳಲ್ಲಿ ಲೆಕ್ಸ್ ಲೂಥರ್ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ.(ಏಜೆನ್ಸೀಸ್)