ಕರೊನಾ ಆತಂಕ ಇದ್ದರೂ ನಿಲ್ಲದ ಭಯೋತ್ಪಾದಕ ಚಟುವಟಿಕೆ; ಇಂದು ಇಬ್ಬರು ಉಗ್ರರನ್ನು ಕೊಂದು ಹಾಕಿದ ಭದ್ರತಾ ಪಡೆ

Terrorists 31 Dec 19
Published on

ಶ್ರೀನಗರ: ಕರೊನಾ ವೈರಸ್​ನ ಭಯಕ್ಕೆ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್​ಡೌನ್​ ಆಗಿವೆ. ಸದ್ಯದ ಮಟ್ಟಿಗೆ ಕರೊನಾ ವಿರುದ್ಧ ಹೋರಾಡುವುದೇ ಪ್ರಥಮ ಆದ್ಯತೆಯಾಗಿದೆ. ಆದರೆ ಉಗ್ರರಿಗೆ ಮಾತ್ರ ಈ ಆತಂಕ ತಟ್ಟಿದಂತಲ್ಲ. ಯಥಾ ಪ್ರಕಾರ ಭಾರತದ ಸೈನ್ಯಕ್ಕೆ ಉಪಟಳ ನೀಡುತ್ತಿದ್ದಾರೆ.

ಕುಲಗಾಂವ್​ನಲ್ಲಿ ಇಂದು ಇಬ್ಬರು ಉಗ್ರರನ್ನು ಭಾರತೀಯ ಸೇನಾ ಯೋಧರು ಹೊಡೆದುರುಳಿಸಿದ್ದಾರೆ. ಮುಂಜಾನೆಯಿಂದಲೂ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಲೇ ಇತ್ತು.

ಕುಲಗಾಂವ್​​ನಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ನಂಬಲರ್ಹ ಮೂಲಗಳಿಂದ ಸಿಕ್ಕಿತ್ತು. ಅದರ ಅನ್ವಯ ಕಾರ್ಯಾಚಾರಣೆ ನಡೆಸಲಾಗಿತ್ತು. ಇಬ್ಬರು ಹತರಾಗಿದ್ದಾರೆ. ಇನ್ನೂ ಗುಂಡಿನಚಕಮಕಿ ನಡೆಯುತ್ತಿದೆ ಎಂದು ಜಮ್ಮುಕಾಶ್ಮೀದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net