

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ನಡದ ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರನ್ನು ಹೊಡೆದುರುಳಿಸಲಾಗಿದೆ. ಹತ್ಯೆಗೀಡಾಗಿರುವ ಇಬ್ಬರೂ ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವರು ಎಂದು ತಿಳಿದುಬಂದಿದೆ.
ದಕ್ಷಿಣ ಕಾಶ್ಮೀರದ ಅನಂತ್ನಾಗ್ನ ಚಕ್ವಾನ್ಗುಂಡ್ ನಿವಾಸಿ ಇಷ್ಫಾಕ್ ಗನಿ ಮತ್ತು ಅವಂತಿಪೊರ ಡೊಗ್ರಿಪೊರದ ಯವರ್ ಅಯ್ಯುಬ್ ದಾರ್ ಎಂಬವರೇ ಹತ್ಯೇಗೀಡಾದ ಉಗ್ರರು. ಈ ಇಬ್ಬರು ಹಲವಾರು ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವುದು ತಿಳಿದುಬಂದಿದೆ.
ಇಂದು ಇವರು ಅನಂತ್ನಾಗ್ ಬಿಜ್ಬೆಹಾರ ಪ್ರದೇಶದ ಶಿಟಿಪೊರ ಎಂಬಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ನಡೆಸಿದ ಪ್ರತಿದಾಳಿಯಲ್ಲಿ ಉಗ್ರರನ್ನು ಸಾವಿಗೀಡಾಗಿದ್ದಾರೆ.