ಈಜುಕೊಳದಲ್ಲಿ ಮುಳುಗಿ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಬ್ಬರ ಸಾವು

Swimming
Published on

ಬೆಂಗಳೂರು: ಈಜುಕೊಳವೊಂದರಲ್ಲಿ ಮುಳುಗಿ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಬ್ಬರು ಸಾವಿಗೀಡಾದ ಪ್ರಕರಣವೊಂದು ನಗರದಲ್ಲಿ ನಡೆದಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ.

ಅನ್ನಪೂರ್ಣೇಶ್ವರಿ ಬಡಾವಣೆಯ ಎಂಎನ್​ಸಿ ಅಕಾಡೆಮಿಯಲ್ಲಿ ಈ ಅವಘಡ ಸಂಭವಿಸಿದೆ. ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರು ಇಂದು ಮಧ್ಯಾಹ್ನ ಇಲ್ಲಿನ ಸ್ವಿಮ್ಮಿಂಗ್​ ಪೂಲ್​ಗೆ ತೆರಳಿದ್ದರು. ಮಧ್ಯಾಹ್ನ ಮೂರು ಗಂಟೆಗೆ ಅವಘಡ ಸಂಭವಿಸಿದೆ.

ಇದು ಈಜು ತರಬೇತಿ ನೀಡುವ ಅಕಾಡೆಮಿ ಆಗಿದ್ದು, ಈ ಮಕ್ಕಳು ಇಲ್ಲಿಗೆ ಹೋಗಿದ್ದಾಗ ಮುಳುಗಿ ಮೃತಪಟ್ಟಿದ್ದಾರೆ. ಸಾವಿಗೀಡಾದ ಇಬ್ಬರೂ ಹತ್ತರಿಂದ ಹನ್ನೊಂದರ ವಯಸ್ಸಿನವರು. ಮೃತಪಟ್ಟವರ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net