VIDEO: ಸಮುದ್ರ ತೀರದಲ್ಲಿ ಮೋಜು ಮಸ್ತಿಯಲ್ಲಿದ್ದ ಜನರನ್ನು ಓಡಿಸುತ್ತಿರುವ ಸೀ ಲಯನ್​! ಜಾಲತಾಣದಲ್ಲಿ ಭಾರೀ ಮೆಚ್ಚುಗೆ

Sealion
Published on

ಕ್ಯಾಲಿಫೋರ್ನಿಯಾ: ಸಮುದ್ರ ತೀರದಲ್ಲಿ ಮೋಜು ಮಾಡಲು ಬಂದಿದ್ದ ಜನರನ್ನು ಅಲ್ಲಿ ಇರಲು ಬಿಡದೇ ಸೀ ಲಯನ್​ಗಳು ಓಡಿಸುತ್ತಿರುವ ಅಚ್ಚರಿ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

ಕ್ಯಾಲಿಫೋರ್ನಿಯಾದ ಸ್ಯಾನ್​ ಡಿಯಾಗೋ ಬೀಚ್​ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಬೀಚ್​ನ ಮರಳಿನಲ್ಲಿ ಕುಳಿತಿದ್ದ ಜನರ ಕಡೆ ಧಾವಿಸಿ ಬಂದ ಸೀ ಲಯನ್​ಗಳಿಂದ ಬೆದರಿದ ಜನ ಓಡುತ್ತಿರುವ ದೃಶ್ಯವನ್ನು ಪ್ರವಾಸಿಗರು ಸೆರೆ ಹಿಡಿದಿದ್ದಾರೆ.

ಸದ್ಯ ಯಾರಿಗೂ ಗಾಯವಾಗಿಲ್ಲ. ಜನರನ್ನು ಸುರಕ್ಷಿತವಾಗಿ ಬೀಚ್​ನಿಂದ ಹೊರ ಕರೆತರಲಾಗಿದ್ದು, ಸದ್ಯ ಜೀವ ರಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಪ್ರಪಂಚದ ವಿಶೇಷ ಜೀವಿಗಳೆಂದೇ ಸಮುದ್ರ ಸಿಂಹಗಳೆಂದು ಕರೆಯಲ್ಪಡುತ್ತವೆ. ಸಾಮಾನ್ಯವಾಗಿ ನಿಧಾನವಾಗಿ ಚಲಿಸುವ ಇವು ಈ ವಿಡಿಯೋದಲ್ಲಿ ಮನುಷ್ಯರ ಮೇಲೆ ಕೋಪಗೊಂಡು ವೇಗವಾಗಿ ಓಡುತ್ತಿರುವ ವಿಡಿಯೋ ಹಾಸ್ಯಾಸ್ಪದವಾಗಿದೆ.

ಸದ್ಯ ಈ ವಿಡಿಯೋವನ್ನು ಬ್ಯುಟೆಂಗೆಬೀಡೆನ್ ಎಂಬುವರು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ಈವರೆಗೆ 2.1ಮಿಲಿಯನ್​ ಜನರು ವೀಕ್ಷಿಸಿದ್ದಾರೆ. 79,000 ಮಂದಿ ಲೈಕ್​​ ಮಾಡಿದ್ದು, 7,000 ಕ್ಕೂ ಅಧಿಕ ಮಂದಿ ಮರುಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net