ಗಾಳಿ ತುಂಬುವ ವೇಳೆಯೇ ಜೆಸಿಬಿ ಟೈರ್​ ಸ್ಫೋಟಗೊಂಡು ಇಬ್ಬರು ಕಾರ್ಮಿಕರ ದೇಹ ಛಿದ್ರ ಛಿದ್ರ: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Tyre blast
Published on

ರಾಯಪುರ: ಜೆಸಿಬಿ ಟೈರ್​ ಸ್ಫೋಟಗೊಂಡು ಇಬ್ಬರು ಮೃತಪಟ್ಟಿರುವ ಭೀಕರ ಘಟನೆ ಛತ್ತೀಸ್​ಘಡದ ರಾಯಪುರದಲ್ಲಿ ನಡೆದಿದೆ.

ಜೆಸಿಬಿ ಟೈರ್​ ಸ್ಫೋಟಗೊಂಡು ಇಬ್ಬರು ಕಾರ್ಮಿಕರ ಮೃತದೇಹ ಛಿದ್ರವಾಗಿರುವ ದೃಶ್ಯ ಎಂತಹವರನ್ನು ಎದೆ ನಡುಗಿಸುತ್ತದೆ. ಜೆಸಿಬಿ ನಿಲ್ಲಿಸಿದ ಗೋಡೌನಲ್ಲಿ ಟೈರ್​ ಮೇಲೆ ಓರ್ವ ಕಾರ್ಮಿಕ ಟೈರ್​ಗೆ ಗಾಳಿ ತುಂಬುತ್ತಿದ್ದ, ಅಲ್ಲೇ ನಿಂತಿದ್ದ ಮತ್ತೊಬ್ಬ ಕಾರ್ಮಿಕ ಟೈರನ್ನು ಕೈನಿಂದ ಜೋರಾಗಿ ಒತ್ತಿದ್ದಾನೆ. ಈ ವೇಳೆ ಟೈರ್ ಸ್ಫೋಟಗೊಂಡಿದೆ.


ಇಬ್ಬರ ದೇಹ ಛಿದ್ರಗೊಂಡಿದ್ದು, ಟೈರ್​ ಸ್ಫೋಟಗೊಳ್ಳಲು ನಿಖರ ಕಾರಣವೇನಿರಬಹುದೆಂದು ತಿಳಿದುಬಂದಿಲ್ಲ. ಇನ್ನು ಇಬ್ಬರು ಕಾರ್ಮಿಕರು ಮಧ್ಯಪ್ರದೇಶ ಮೂಲದವರೆಂದು ತಿಳಿದುಬಂದಿದೆ. ಈ ಬಗ್ಗೆ ಇಬ್ಬರು ಪೊಲೀಸರಿಂದ ತನಿಖೆ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net