ಕೆಲಸಕ್ಕೆಂದು ಪ್ರಾಣಿ ಸಂಗ್ರಹಾಲಯಕ್ಕೆ ಹೋದವರು ಹೆಣವಾದರು

Zoo
Published on

ಕೋಲ್ಕತ್ತ: ಇಲ್ಲಿನ ಅಲಿಪೊರ್​ ಪ್ರಾಣಿ ಸಂಗ್ರಹಾಲಯಕ್ಕೆ ಖಾಸಗಿ ಕಂಪನಿಗಳ ಹೋರ್ಡಿಂಗ್​ ಹಾಕಲು ತೆರಳಿದ್ದ ಇಬ್ಬರು ಕೆಲಸಗಾರರು ಮೃತಪಟ್ಟಿದ್ದು, ಇನ್ನೋರ್ವ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಇಂದು ಮತ್ತು ನಾಳೆ ಲಾಕ್​ಡೌನ್​. ಇದೇ ಸಂದರ್ಭದಲ್ಲಿ ಕೆಲವು ಖಾಸಗಿ ಕಂಪನಿಗಳ 15-20 ಉದ್ಯೋಗಿಗಳು ಅಲಿಪೋರ್​ ಪ್ರಾಣಿ ಸಂಗ್ರಹಾಲಯದಲ್ಲಿ ಜಾಹೀರಾತುಗಳ ಹೋರ್ಡಿಂಗ್​ ಹಾಕುವ ಕೆಲಸ ಮಾಡುತ್ತಿದ್ದರು. ಅದರಲ್ಲಿ ಮುರ್ಶಿದಾಬಾದ್​​ನ ತಾರಿಣಿ ಘೋಷ್​, ಪ್ರದೀಪ್​ ಭಾದ್ರಾ ಮತ್ತು ಲಿಟೋನ್​ ದಾಸ್​ ಎಂಬುವರು ಆನೆಗಳಿರುವ ಸ್ಥಳದ ಬಳಿ ಕಬ್ಬಿಣದ ಕಂಬವನ್ನು ಅಳವಡಿಸುತ್ತಿದ್ದರು. ಆದರೆ ದುರದೃಷ್ಟವಶಾತ್​ ವಿದ್ಯುತ್​ ಶಾಕ್​ ಹೊಡೆದಿದೆ. ಅವರೆಲ್ಲರೂ ವಿದ್ಯುತ್​ ಪ್ರವಹಿಸುತ್ತಿದ್ದ ತಂತಿಯನ್ನು ಸ್ಪರ್ಶಿಸಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಇದನ್ನೂ ಓದಿ: ಮತ್ತೆ ನ್ಯೂಕ್ಲಿಯರ್​ ದಾಳಿಯ ಗೊಡ್ಡು ಬೆದರಿಕೆಯನ್ನೊಡ್ಡಿದ ಪಾಕಿಸ್ತಾನ; ಅವರ ಅಸ್ತ್ರ ಪರ್ಫೆಕ್ಟ್​ ಇದ್ಯಂತೆ !

ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಮಳೆಯಿಂದಾಗಿ ಈ ಶಾಕ್​ ಉಂಟಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಲಾಕ್​ಡೌನ್​ ಸಂದರ್ಭದಲ್ಲಿ ಕೆಲಸ ನಡೆಯುತ್ತಿರುವ ಬಗ್ಗೆಯೂ ವಿಚಾರಣೆ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net