ದಸರಾ ರಜೆಯ ಮೋಜಿನಲ್ಲಿ ಪ್ರಾಣ ಕಳೆದುಕೊಂಡ ಬಾಲಕರು; ಮೂವರ ಪೈಕಿ ಒಬ್ಬ ಪ್ರಾಣಾಪಾಯದಿಂದ ಪಾರು

Boys
Published on

ಹಾಸನ: ದಸರಾ ರಜೆಯ ಖುಷಿಯಲ್ಲಿ ಮೋಜಿಗಿಳಿದ ಮೂವರು ಬಾಲಕರ ಪೈಕಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಇನ್ನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಾಸನ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ.

ಸಾಣೇನಹಳ್ಳಿ ಗ್ರಾಮದ ಸುಧಾಕರ್ ಎಂಬವರ ಪುತ್ರ ಆಕಾಶ್ ಹಾಗೂ ಶ್ರೀನಿವಾಸ್ ಎಂಬವರ ಪುತ್ರ ಲೋಕೇಶ್ ಸಾವಿಗೀಡಾದ ಬಾಲಕರು. ಚನ್ನರಾಯಪಟ್ಟಣ ತಾಲೂಕಿನ ಮಂಜುನಾಥಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ಶಾಲೆಗೆ ದಸರಾ ರಜೆ ಇದ್ದ ಕಾರಣ ಮೂವರು ಬಾಲಕರು ಮಂಜುನಾಥಪುರ ಗ್ರಾಮದ ಸಮೀಪವಿದ್ದ ಕೆರೆಗೆ ಈಜಲು ತೆರಳಿದ್ದರು. ಈಜು ಬರದಿದ್ದರೂ ಕೆರೆಗೆ ಇಳಿದಿದ್ದರಿಂದ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಮೂವರಲ್ಲಿ ಇಬ್ಬರು ಸಾವಿಗೀಡಾಗಿದ್ದು, ಇನ್ನೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಶ್ರವಣಬೆಳಗೊಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net