ಇನ್ನಿಬ್ಬರು ಉಪಲೋಕಾಯುಕ್ತರ ನೇಮಕ ಅಗತ್ಯ

Deputy Lokayukta, Justice K.N. Phanindra
ಉಪ ಲೋಕಾಯುಕ್ತ, ನ್ಯಾ. ಕೆ.ಎನ್.ಫಣೀಂದ್ರ
Published on

ಶಿವಮೊಗ್ಗ: ಲೋಕಾಯುಕ್ತರ ಬಳಿ ಸುಮಾರು 7 ಸಾವಿರ ಪ್ರಕರಣ ಬಾಕಿ ಇದ್ದು, ನನ್ನ ಬಳಿ ಸುಮಾರು 10,000 ಪ್ರಕರಣ ಇವೆ. ಮತ್ತೊಬ್ಬ ಉಪ ಲೋಕಾಯುಕ್ತರ ಬಳಿಯೂ ಅಷ್ಟೇ ಪ್ರಕರಣಗಳಿವೆ. ಪ್ರತಿನಿತ್ಯ ಸಾಕಷ್ಟು ದೂರು ಬರುತ್ತಿವೆ. ಹಾಗಾಗಿ ಇನ್ನೂ ಇಬ್ಬರು ಉಪ ಲೋಕಾಯುಕ್ತರ ನೇಮಕ ಮಾಡುವುದು ಸೂಕ್ತ ಎಂದು ಉಪ ಲೋಕಾಯುಕ್ತ, ನ್ಯಾ. ಕೆ.ಎನ್.ಫಣೀಂದ್ರ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಲ್ಬರ್ಗಾ, ಧಾರವಾಡ ವಲಯ ಎಂದು ವಿಭಾಗಿಸಿ ಉಪ ಲೋಕಾಯುಕ್ತ ನೇಮಕ ಆಗಬೇಕು. ಲೋಕಾಯುಕ್ತಕ್ಕೂ, ಭ್ರಷ್ಟಾಚಾರ ತಡೆ ಕಾಯ್ದೆಗೂ ಸಂಬಂಧವಿಲ್ಲ ಎಂದು ಹೇಳಿದರು.

ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾದಾಗ ಪೊಲೀಸ್ ಮತ್ತು ನ್ಯಾಯಾಲಯದ ನಡುವೆ ನಡೆಯುತ್ತದೆ. ಲೋಕಾಯುಕ್ತ ಕಾಯ್ದೆ ಅಡಿ ಪ್ರಕರಣ ದಾಖಲಾದರೆ ಆರೋಪಿ ಆಗುವುದಿಲ್ಲ. ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಮಾತ್ರ ಆರೋಪಿ. ಇನ್ನು ದಾಳಿ ನಡೆಸಿ ಲಂಚ ಸಮೇತ ಸಿಕ್ಕಿಬಿದ್ದರೂ ಪ್ರಮೋಷನ್ ನೀಡಿ ಅದೇ ಜಾಗಕ್ಕೆ ಹಾಕಿದರೆ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದೇವೆ. ಜಾಮೀನು ಮೇಲೆ ಬಂದಾಗಲೂ ಅದೇ ಜಾಗಕ್ಕೆ ವರ್ಗಾಯಿಸಿದ್ದು ಗಮನಕ್ಕೆ ಬಂದ ತಕ್ಷಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net