ಕುಡಿದ ಮತ್ತಿನಲ್ಲಿ ರೈಲ್ವೇ ಹಳಿಯ ಮೇಲೆ ದ್ವಿಚಕ್ರವಾಹನ ಎಸೆದರು!

railwaytrack
Published on

ಪುಣೆ : ತಮ್ಮ ದ್ವಿಚಕ್ರವಾಹನವನ್ನು ರೈಲ್ವೇ ಹಳಿಯ ಮೇಲೆ ಎಸೆದು, ಓಡುತ್ತಿದ್ದ ಟ್ರೈನಿಗೆ ಸಿಕ್ಕಿಹಾಕಿಕೊಳ್ಳುವಂತೆ ಮಾಡಿದ್ದ ಇಬ್ಬರನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್(ಆರ್​​ಪಿಎಫ್​) ಪೊಲೀಸರು ಬಂಧಿಸಿದ್ದಾರೆ. ಪುಣೆಯ ಪಟಸ್​ನ ಬಳಿಯ ಖುತ್ಬವ್​ ರೈಲು ನಿಲ್ದಾಣದ ಬಳಿಯಲ್ಲಿ ಕುಡಿದ ಅಮಲಿನಲ್ಲಿ ಈ ಅಚಾತುರ್ಯ ಎಸಗಿದ್ದರು ಎನ್ನಲಾಗಿದೆ.

ಜೂನ್​ 11 ರಂದು 35 ವರ್ಷ ವಯಸ್ಸಿನ ಆಕಾಶ್​ ಗುದ್ದವರ್​ ಮತ್ತು ಇನ್ನೊಬ್ಬ ವ್ಯಕ್ತಿಯು ಕುಡಿದ ಮತ್ತಿನಲ್ಲಿ ದ್ವಿಚಕ್ರವಾಹನವೊಂದನ್ನು ರೈಲು ಹಳಿಯ ಮೇಲಕ್ಕೆ ನೂಕಿದ್ದರು. ಆ ಸಂದರ್ಭದಲ್ಲಿ ಖುತ್ಬವ್ ರೈಲು ನಿಲ್ದಾಣವನ್ನು ದಾಟಿದ ಪುಣೆ ದಾನಾಪುರ್ ಎಕ್ಸ್​ಪ್ರೆಸ್​ ಟ್ರೈನಿನ ಇಂಜಿನ್ನಿನ ಕೆಳಗೆ ಆ ವಾಹನ ಸಿಲುಕಿಕೊಂಡಿದ್ದು, 17 ಕಿಲೋಮೀಟರ್​ಗಳವರೆಗೆ ಎಳೆದೊಯ್ಯಲ್ಪಟ್ಟಿತು. ತದನಂತರ ಏನೋ ಚಲನೆಯಾಗುತ್ತಿರುವುದನ್ನು ಗಮನಿಸಿದ ಚಾಲಕ ರೈಲು ನಿಲ್ಲಿಸಿದ ಪರಿಣಾಮ ಯಾವುದೇ ದುರಂತ ಸಂಭವಿಸಲಿಲ್ಲ ಎಂದು ಆರ್​ಪಿಎಫ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net