

ಮೈಸೂರು: ಕ್ಷುಲಕ್ಲ ಕಾರಣಕ್ಕೆ ನಗರದಲ್ಲಿ ಗುರುವಾರ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಡಕಳ್ಳಿ ಗ್ರಾಮದ ನಿವಾಸಿ ನಾಗರಾಜು ಪುತ್ರಿ ಮೋನಿಕಾ (20), ಜ್ಯೋತಿ ನಗರದ ನಿವಾಸಿ ಮುರುಗೇಶ್ ಪುತ್ರ ಮನು (22) ಆತ್ಮಹತ್ಯೆಗೆ ಶಣರಾದವರು. ಮೋನಿಕಾ ಮನು ಅವರ ಅತ್ತೆ ಮಗಳಾಗಿದ್ದು, ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದ ಮನೆಯವರು ವಿವಾಹ ಮಾಡಿಸಲು ಸಮ್ಮತಿ ಸೂಚಿಸಿದ್ದರು.
ಮೋನಿಕಾ ದಟ್ಟಗಳ್ಳಿಯ ಮನೆಯೊಂದರಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ನೆಲೆಸಿದ್ದರು. ಬುಧವಾರ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಇದರಿಂದ ಮನನೊಂದ ಮೋನಿಕಾ ಕೆಲಸ ಮಾಡುತ್ತಿದ್ದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಮಾಡಿಕೊಂಡರು. ಈ ವಿಚಾರ ತಿಳಿದ ಮನು ಸಹ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕುವೆಂಪುನಗರ ಮತ್ತು ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.