ಲಾರಿಗಳ ಮುಖಾಮುಖಿ ಡಿಕ್ಕಿ; ಭಯ ಹುಟ್ಟಿಸುವಂತಿದ್ದ ಅಪಘಾತದ ದೃಶ್ಯ

accident
Published on

ಗದಗ: ತಾಲೂಕಿನ ನಾರಾಯಣಪುರ ಗ್ರಾಮದ ಬಿಳಿ ಸೋಮವಾರ ತಡರಾತ್ರಿ ಎರಡು ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಲಾರಿ ಗಜೇಂದ್ರಗಡದಿಂದ ಗದಗ ಮೂಲಕ ತುಮಕೂರಿಗೆ ತೆರಳುತ್ತಿತ್ತು. ಮತ್ತೊಂದು ಗದಗದಿಂದ ಕುಷ್ಟಗಿಗೆ ತೆರಳುತ್ತಿತ್ತು. ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿದ್ದು, ವಾಹನಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿವೆ. ಈ ದುರಂತದಲ್ಲಿ ಒಬ್ಬ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದು, ಮತ್ತೊಬ್ಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇದನ್ನೂ ಓದಿರಿ ಅಮಾವಾಸ್ಯೆ ದಿನ ಸಂಭವಿಸಿತು ಭೀಕರ ಅಪಘಾತ! ಈ ದೃಶ್ಯ ನೋಡಿದ್ರೆ ಬೆಚ್ಚಿಬೀಳ್ತೀರಿ…

ನಾರಾಯಣಪುರ ಬಳಿ ಸಂಭವಿಸಿದ ಅಪಘಾತದಲ್ಲಿ ಲಾರಿ ಚಾಲಕರಾದ ಮೈಸೂರು ಮೂಲದ ಮಂಜುನಾಥ (55) ಮತ್ತು ಹಾಗೂ ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದ ಮೋಹನ್ (40) ಮೃತಪಟ್ಟಿದ್ದಾರೆ. ಲಾರಿಗಳ ಮುಖಾಮುಖಿ ಡಿಕ್ಕಿಯಲ್ಲಿ ಚಾಲಕರ ದೇಹಗಳು ನಜ್ಜುಗುಜ್ಜಾಗಿ ತೀವ್ರ ರಕ್ತಸ್ರಾವವಾಗಿದ್ದ ದೃಶ್ಯ ಭಯ ಹುಟ್ಟಿಸುವಂತಿತ್ತು. ಗದಗ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net