

Stampede: ಉತ್ತರ ಪ್ರದೇಶದ ಬಾರಾಬಂಕಿಯ ಔಸನೇಶ್ವರ ಮಹಾದೇವ ದೇವಸ್ಥಾನದಲ್ಲಿ ಸೋಮವಾರ(ಜು. 28) ಬೆಳಗ್ಗೆ ಕಾಲ್ತುಳಿತ ಸಂಭವಿಸಿ ಇಬ್ಬರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಾಗೊಂಡ ಘಟನೆ ನಡೆದಿದೆ.
ಶ್ರಾವಣ ಮಾಸದ ಮೂರನೇ ಸೋಮವಾರದಂದು ಶಿವನ 'ಜಲಾಭಿಷೇಕ'ದಲ್ಲಿ ಪಾಲ್ಗೊಳ್ಳಲು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಹಳ ಜನ ಭಕ್ತರು ದೇವಸ್ಥಾನದಲ್ಲಿ ಸೇರಿದ್ದರು. ಈ ವೇಳೆ ವಿದ್ಯುತ್ ತಂತಿ ಕಟ್ಟಾಗಿ ಬಿದ್ದಿದ್ದರಿಂದ ಜನ ದಿಕ್ಕಪಾಲಾಗಿ ಓಡಿದ್ದರಿಂದ ಕಾಲ್ತುಳಿತ ಸಂಭವಿಸಿದೆ.
ಘಟನೆಯಲ್ಲಿ ಮುಭಾರಕ್ಪುರದ ಪ್ರಶಾಂತ್(22), ತ್ರಿವೇದಿಗಂಜ್ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡ ಐವರನ್ನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರಿಗೆ ತ್ರಿವೇದಿಗಂಜ್ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋತಿಗಳ ಗುಂಪೊಂದು ಹೈವೋಲ್ಟೇಜ್ ವಿದ್ಯುತ್ ತಂತಿಯ ಮೇಲೆ ಕೂತಿದ್ದವು. ಈ ವೇಳೆ ತಂತಿ ಮುರಿದು ದೇವಾಲಯದ ಆವರಣದಲ್ಲಿರುವ ಟಿನ್ ಶೆಡ್ ಮೇಲೆ ಬಿದ್ದಿತು. ತಂತಿಯಲ್ಲಿ ವಿದ್ಯುತ್ ಇದೆ ಎಂದು ಜನರು ಪ್ಯಾನಿಕ್ ಆಗಿ ದಿಕ್ಕಪಾಲಾಗಿ ಓಡಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಲ್ತುಳಿತದ ಘಟನೆ ಬಳಿಕ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಶಾಂಕ್ ತ್ರಿಪಾಠಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅರ್ಪಿತ್ ವಿಜಯವರ್ಗಿಯ ಅವರು ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆದಾಗ್ಯೂ 2 ಗಂಟೆಗಳಲ್ಲಿ ದೇವಾಲಯದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು. ಭಕ್ತರು ತಮ್ಮ ಜಲಭಿಷೇಕ ವಿಧಿಗಳನ್ನು ಪುನರಾರಂಭಿಸಿದರು.(ಏಜೆನ್ಸೀಸ್)