

ರಾಯ್ಪುರ್: ಭಾನುವಾರ ರಾತ್ರಿ ಛತ್ತೀಸ್ಗಢ್ನ ಎರಡು ಜಿಲ್ಲೆಗಳಲ್ಲಿ ನಕ್ಸಲರು ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಕಾನ್ಸ್ಟೆಬಲ್, ಮತ್ತೋರ್ವ ಬಿಎಸ್ಎಫ್ ಯೋಧ ಗಾಯಗೊಂಡಿದ್ದಾಗಿ ವರದಿಯಾಗಿದೆ.
ದಾಂತೇವಾಡ್ ಮತ್ತು ಕಾಂಕರ್ ಜಿಲ್ಲೆಗಳಲ್ಲಿ ಸ್ಫೋಟ ಸಂಭವಿಸಿದೆ. ದಾಂತೇವಾಡ್ನ ಪೊಟಾಲಿ ಗ್ರಾಮದ ಬಳಿ ಪ್ರಷರ್ ಬಾಂಬ್ ಸ್ಫೋಟದಿಂದಾಗಿ ಪೊಲೀಸ್ ಕಾನ್ಸ್ಟೆಬಲ್ ಗಾಯಗೊಂಡಿದ್ದಾರೆ ಎಂದು ದಾಂತೇವಾಡ್ನ ಎಸ್ಪಿ ಅಭಿಷೇಕ್ ಪಲ್ಲವ್ ತಿಳಿಸಿದ್ದಾರೆ.
ಕಾಂಕರ್ನಲ್ಲಿ ಬಿಎಸ್ಎಫ್ನ ಜವಾನ್ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಗಾಯವಾಗಿರುವ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.