ಸಾಕುನಾಯಿಗಾಗಿ ಕ್ರೀಡಾಳುಗಳನ್ನು ಮೈದಾನದಿಂದ ಹೊರಗೆ ಕಳಿಸ್ತಿದ್ದ ಐಎಎಸ್​ ಅಧಿಕಾರಿ ಎತ್ತಂಗಡಿ

IAS
Published on

ನವದೆಹಲಿ: ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ತಕ್ಷಣದಿಂದ ಜಾರಿಗೆ ಬರುವಂತೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ರಾಷ್ಟ್ರ ರಾಜಧಾನಿಯಲ್ಲಿ ನೆಲೆಸಿದ್ದವರನ್ನು ಬೇರೆಡೆಗೆ ಕಳಿಸಿದೆ.

ಐಎಎಸ್​ ಅಧಿಕಾರಿಗಳಾದ ಸಂಜೀವ್ ಖಿರ್​​ವಾರ್ ಮತ್ತು ರಿಂಕು ದುಗ್ಗ ವರ್ಗಾವಣೆಯಾದವರು. ಸಂಜೀವ್ ಅವರನ್ನು ದೆಹಲಿಯಿಂದ ಲಡಾಖ್​ಗೆ ಮತ್ತು ರಿಂಕು ಅವರನ್ನು ಅರುಣಾಚಲ ಪ್ರದೇಶಕ್ಕೆ ಟ್ರಾನ್ಸ್​ಫರ್​ ಮಾಡಲಾಗಿದೆ.

ಈ ಪೈಕಿ ಸಂಜೀವ್ ಖಿರ್​ವಾರ್ ತಮ್ಮ ಸಾಕುನಾಯಿಯ ಕಾರಣಕ್ಕಾಗಿ ತಳೆದ ನಿಲುವಿನಿಂದ ವಿವಾದಕ್ಕೀಡಾಗಿದ್ದರು. ಇವರು ದೆಹಲಿಯ ಕ್ರೀಡಾಂಗಣದಲ್ಲಿ ತಮ್ಮ‌ ಮನೆಯ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವ ಸಲುವಾಗಿ ಪ್ರತಿ ದಿನ ಕ್ರೀಡಾಪಟುಗಳನ್ನು ಮೈದಾನದಿಂದ ಹೊರಗೆ ಕಳಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net