ಹೊಸಪೇಟೆಯಲ್ಲಿ ‘ಎರಡು ತಲೆಯ ವಿಚಿತ್ರ ಕುರಿಮರಿ’ ಜನನ!

sheep pic
Published on

ವಿಜಯನಗರ: ಜಿಲ್ಲೆಯ ಹೊಸಪೇಟೆ‌ ತಾಲೂಕಿನ ಕೆರೆ ತಾಂಡಾ ಕಮಲಾಪುರದ ಗುಜ್ಜಲ್ ಹೇಮಗಿರಿಯಪ್ಪ ಎಂಬುವರಿಗೆ ಸೇರಿದ ಕುರಿಯೊಂದು‌ ವಿಚಿತ್ರವಾದ ಮರಿಗೆ ಜನ್ಮ ನೀಡಿದೆ.

ಕುರಿಯೊಂದು ಎರಡು ತಲೆ ಇರುವ ಮರಿಗೆ ಜನ್ಮ ನೀಡಿದ್ದು, ಮನೆಯವರೆಲ್ಲ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಎರಡು ತಲೆಯ ಅಪರೂಪದ ಕುರಿಮರಿಗೆ ಜನ್ಮ ನೀಡಿದ ಕುರಿ ಮತ್ತು ಮರಿ ಆರೋಗ್ಯವಾಗಿವೆ.

ಹಿಂದೆ ಈ ರೀತಿಯ ವಿಚಿತ್ರ ಕುರಿ ಮರಿಗಳ ಜನನವಾಗಿವೆ. ಆದರೆ ವೈದ್ಯರ ಪ್ರಕಾರ ಇಂತಹ ಕುರಿಗಳು ಬಹಳ ದಿನಗಳ ಕಾಲ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net