ಈ ದಿನದಂದು ರಿ-ರಿಲೀಸ್​ ಆಗಲಿವೆ ತಲೈವಾ ನಟನೆಯ 2 ಬ್ಲಾಕ್​​ಬಸ್ಟರ್​ ಚಿತ್ರಗಳು!

Untitled design - 2023-08-17T113219.056
Published on

ತಮಿಳುನಾಡು: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್, ತಲೈವಾ ರಜನಿಕಾಂತ್ ಅವರು ಇದೀಗ 'ಜೈಲರ್'​ ಚಿತ್ರ ದೇಶಾದ್ಯಂತ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಜತೆಗೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಈ ಸಂಗತಿ ರಜನಿ ಮತ್ತು ಚಿತ್ರತಂಡಕ್ಕೆ ಭಾರೀ ಸಂತಸ ತಂದಿದೆ. ಈ ಮಧ್ಯೆ ತಲೈವಾ ನಟನೆಯ ಎರಡು ಸೂಪರ್​ ಹಿಟ್​ ಚಿತ್ರಗಳು ಇದೀಗ ಮರು ಬಿಡುಗಡೆಯಾಗಲು ಸಜ್ಜಾಗಿದೆ.

ಸೂಪರ್​​ಸ್ಟಾರ್​ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಲಭಿಸಿದ್ದು, ತಮ್ಮ ನೆಚ್ಚಿನ ನಟನ ಎರಡು ಸೂಪರ್​ ಹಿಟ್​ ಚಿತ್ರಗಳು ರಿ-ರಿಲೀಸ್​ ಆಗಲಿದೆ. ಈ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್​ ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ ಮತ್ತು ಬಿಡುಗಡೆಯ ದಿನಾಂಕದತ್ತ ಹೆಚ್ಚು ಗಮನಹರಿಸಿದ್ದಾರೆ.

ಈ ಹಿಂದೆಯೇ ತಿಳಿಸಿದಂತೆ ರಜನಿಕಾಂತ್ ಅವರ 'ಶಿವಾಜಿ' ಚಿತ್ರ ಡಿಸೆಂಬರ್ 9, 2023 ರಂದು ತೆಲುಗಿನಲ್ಲಿ ಮಾತ್ರ ರಿ-ರಿಲೀಸ್​ ಆಗಲಿದೆ. ಇದರೊಟ್ಟಿಗೆ 1991 ರಲ್ಲಿ ಬಿಡುಗಡೆಗೊಂಡಿದ್ದ ಮಣಿರತ್ನಂ ಬರೆದು, ನಿರ್ದೇಶಿಸಿದ 'ದಳಪತಿ' ಚಿತ್ರವನ್ನು ಶೀಘ್ರದಲ್ಲೇ 4Kಯಲ್ಲಿ ಮರು ಬಿಡುಗಡೆಗೊಳಿಸಲು ಇದೀಗ ಚಿತ್ರತಂಡ ಸಿದ್ಧವಾಗಿದೆ. ಬಿಡುಗಡೆ ದಿನಾಂಕ ಮತ್ತು ಇತರ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net