ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ವೈದ್ಯರು ನಾಪತ್ತೆ; ಜಿಲ್ಲಾಧಿಕಾರಿಯಿಂದ ನೋಟಿಸ್​

Doctors 13 April
Published on

ಉತ್ತರಕನ್ನಡ: ಕಾರವಾರದ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ವೈದ್ಯರು ನಾಪತ್ತೆಯಾಗಿದ್ದಾರೆ.

ಕರೊನಾ ವೈರಸ್ ಪೀಡಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ತರಬೇತಿ ಪಡೆದಿದ್ದ ಇಬ್ಬರು ವೈದ್ಯರನ್ನು ಕಾರವಾರದ ನೌಕಾನೆಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಈಗ ಇವರಿಬ್ಬರೂ ನಾಪತ್ತೆಯಾಗಿದ್ದು, ಮೊಬೈಲ್​ ಕೂಡ ಸ್ವಿಚ್​ ಆಫ್​ ಆಗಿದೆ.

ಈ ಪತಂಜಲಿ ಆಸ್ಪತ್ರೆಯಲ್ಲಿ ಆರು ಮಂದಿ ಕರೊನಾ ಸೋಂಕಿತರು ಇದ್ದಾರೆ. ಇಬ್ಬರು ಸರ್ಜನ್ಗಳು, ಆರು ಜನ ವೈದ್ಯರು, 12ನರ್ಸ್ಗಳು ಮತ್ತು ಆರು ಮಂದಿ ಸಹಾಯಕರನ್ನ ನಿಯೋಜನೆ ಮಾಡಲಾಗಿತ್ತು.

ಆದರೀಗ ಇಬ್ಬರು ವೈದ್ಯರು ನಾಪತ್ತೆಯಾಗಿದ್ದು, ಅವರಿಗೆ ಜಿಲ್ಲಾಧಿಕಾರಿ ನೋಟಿಸ್​ ಜಾರಿ ಮಾಡಿದ್ದಾರೆ. ಇನ್ನು ಏಳುದಿನಗಳಲ್ಲಿ ಉತ್ತರ ನೀಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net