ದೇವಾಲಯ ಉತ್ಸವದಲ್ಲಿ ಆನೆಗಳ ದಾಳಿ! ಇಬ್ಬರು ಸಾವು, 25ಕ್ಕೂ ಅಧಿಕ ಮಂದಿಗೆ ಗಾಯ | Elephant Attack

ವಿಜಯವಾಣಿ - 2025-02-13T202954.951
Published on

ಕೇರಳ: ಇಂದು (ಫೆ.13) ನಡೆದ ದೇವಾಸ್ಥಾನದ ಉತ್ಸವದಲ್ಲಿ ಎರಡು ಆನೆಗಳು (Elephant Attack) ದಿಕ್ಕಾಪಾಲಾಗಿ ಓಡಿದ ಹಿನ್ನೆಲೆ ಇಬ್ಬರು ಸ್ಥಳದಲ್ಲಿ ಸಾವಿಗೀಡಾಗಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಘಟನೆ ಕೇರಳದ ಕೊಝಿಕ್ಕೋಡ್‌ನ ಕುರುವಂಗಾಡ್‌ನಲ್ಲಿರುವ ಮಣಕ್ಕುಳಂಗರ ದೇವಸ್ಥಾನದಲ್ಲಿ ಸಂಭವಿಸಿದೆ. ಮೃತರಾದ ಲೀಲಾ (68) ಮತ್ತು ಅಮ್ಮುಕ್ಕುಟ್ಟಿ (65) ಕುರುವಂಗಾಡ್ ಮೂಲದವರು ಎಂದು ವರದಿಯಾಗಿದೆ. 23 ಗಾಯಾಳುಗಳನ್ನು ಕೊಝಿಕ್ಕೋಡ್​ನ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ.

ಉತ್ಸವದ ಸಮಯದಲ್ಲಿ ಪೀತಾಂಬರನ್ ಮತ್ತು ಗೋಕುಲ್ ಎಂಬ ಎರಡು ಆನೆಗಳು ವಿಚಿತ್ರವಾಗಿ ವರ್ತಿಸಿದ್ದು, ಮನಬಂದಂತೆ ಓಡಾಡಿದ್ದೇ ಈ ದುರಂತಕ್ಕೆ ಕಾರಣವಾಗಿದೆ. "ಮೃತರ ಶವಗಳು ಪ್ರಸ್ತುತ ಕೊಝಿಕ್ಕೋಡ್ ತಾಲ್ಲೂಕು ಆಸ್ಪತ್ರೆಯಲ್ಲಿವೆ ಮತ್ತು ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಗುವುದು" ಎಂದು ಕೊಝಿಕ್ಕೋಡ್ ಪುರಸಭೆಯ ಉಪಾಧ್ಯಕ್ಷ ಕೆ. ಸತ್ಯನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net