

ಆನಂದಪುರ: ಸಾಗರ ತಾಲೂಕು ಆನಂದಪುರ ಮುರುಘಾಮಠ ವೃತ್ತದ ಬಳಿ ಭಾನುವಾರ ಕಾರು-ಬಸ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಚಿಕ್ಕಬಳ್ಳಾಪುರದ ವೇಕ್ಷಿದುರ್ಗಾದ ಶರಣ್(23), ದೇವನಹಳ್ಳಿ ತಾಲೂಕಿನ ಪಂಡಿತಪುರ ಗ್ರಾಮದ ಅಕ್ಷಯ(25) ಸಾವಿಗೀಡಾದವರು. ಶಿವಮೊಗ್ಗ ಕಡೆಯಿಂದ ಸಾಗರಕ್ಕೆ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ಸಾಗರದಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ಕಾರು ಪರಸ್ಪರ ಡಿಕ್ಕಿಯಾಗಿವೆ. ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.