

ಕೇರಳ: (Well Accident ) ಬಾವಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಎರುಮೇಲಿಯಲ್ಲಿ ನಡೆದಿದೆ.
ಮೃತರನ್ನು ಎರುಮೇಲಿ ಮೂಲದ ಅನೀಶ್ ಮತ್ತು ಬಿಜು ಎಂದು ಗುರುತಿಸಲಾಗಿದೆ. ಎರುಮೇಲಿ ಪಟ್ಟಣದ ತುಂಡಿಯಲ್ಲಿರುವ ಶೈಬು ಅವರ ಮನೆಯಲ್ಲಿರುವ ಬಾವಿಯನ್ನು ಸ್ವಚ್ಛಗೊಳಿಸಲು ಹೋಗಿದ್ದಾಗ ಈ ಅಪಘಾತ ಸಂಭವಿಸಿದೆ. ಸ್ವಚ್ಛಗೊಳಿಸುವಾಗ ಉಸಿರುಗಟ್ಟುವಿಕೆಯಿಂದ ಬಳಲುತ್ತಿದ್ದ ಕಾರ್ಮಿಕ ಮತ್ತು ಆತನನ್ನು ರಕ್ಷಿಸಲು ಹೋದ ವ್ಯಕ್ತಿ ಸಾವನ್ನಪ್ಪಿದರು.
ಸ್ಥಳೀಯರು ಹೇಳುವಂತೆ ಬಾವಿ 35 ಅಡಿ ಆಳವಿತ್ತು. ಬಾವಿಯಲ್ಲಿ ಮೂರು ಅಡಿಗಿಂತ ಕಡಿಮೆ ನೀರು ಇತ್ತು. ಬಾವಿಯನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಆಳಕ್ಕೆ ಇಳಿದಿದ್ದಾರೆ. ಮೊದಲು ಬಾವಿಗೆ ಇಳಿದ ವ್ಯಕ್ತಿಯ ಆಮ್ಲಜನಕ ಕೊರತೆಯಿಂದಾಗಿ ಉಸಿರಾಟ ತೊಂದರೆ ಉಂಟಾಗಿದೆ. ಆತನನ್ನು ರಕ್ಷಿಸಲು ಮತ್ತೊಬ್ಬ ಬಾವಿಗೆ ಇಳಿದನು. ಆದರೆ ಉಸಿರಾಟ ತೊಂದರೆಯಿಂದಾಗಿ ಇಬ್ಬರು ಪ್ರಾಣ ಬಿಟ್ಟಿದ್ದಾರೆ.
ಮೃತರ ಶವಗಳನ್ನು ಎರುಮೇಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಅದನ್ನು ಕುಟುಂಬಕ್ಕೆ ನೀಡಲಾಗುವುದು.