ಈಶಾನ್ಯ ದೆಹಲಿ ಹಿಂಸಾಚಾರಲ್ಲಿ ಮೃತಪಟ್ಟವರ ಸಂಖ್ಯೆ 44ಕ್ಕೆ ಏರಿಕೆ; ಇಂದು ಮೋರಿಯಲ್ಲಿ ಸಿಕ್ಕಿದವು ಎರಡು ಶವಗಳು...

Delhi Violence 1 Mrch 3
Published on

ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರದಲ್ಲಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮನೆಯಿಂದ ಹೊರಟವರು, ಮನೆಗೆ ವಾಪಸ್​ ಬರುವವರು ಸೇರಿ ಅನೇಕರು ಸ್ಥಳದಿಂದಲೇ ನಾಪತ್ತೆಯಾಗಿ, ಬಳಿಕ ಅವರ ಮೃತದೇಹ ಆಸ್ಪತ್ರೆಗಳಲ್ಲಿ, ಮೋರಿಗಳಲ್ಲಿ, ರಸ್ತೆಬದಿಗಳಲ್ಲಿ ಸಿಕ್ಕಿದಂತಹ ಘಟನೆಗಳು ನಡೆದಿವೆ.

ಇಂದು ಗೋಕುಲ್​ಪುರಿಯ ಮೋರಿಯೊಂದರಲ್ಲಿ ಎರಡು ಮೃತದೇಹಗಳು ಸಿಕ್ಕಿವೆ. ಈ ಎರಡು ಶವಗಳು ಸಿಗುವುದರೊಂದಿಗೆ ಈಶಾನ್ಯ ದೆಹಲಿ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 44 ಕ್ಕೆ ಏರಿದೆ. ಈ ದುರ್ಘಟನೆಯಲ್ಲಿ ಒಟ್ಟು 250 ಜನರು ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಯ ಹೊತ್ತಿಗೆ ಒಂದು ಶವ ಮೋರಿಯಲ್ಲಿ ಸಿಕ್ಕಿತು. ಅದಾದ ಬಳಿಕ ಮಧ್ಯಾಹ್ನ 3ಗಂಟೆಗೆ ಮತ್ತೊಂದು ಮೃತದೇಹವೂ ದೊರೆಯಿತು. ಇವರಿಬ್ಬರ ಗುರುತು ಮಾತ್ರ ಇನ್ನೂ ಗೊತ್ತಾಗಿಲ್ಲ. ಈಗೆರಡು ದಿನಗಳ ಹಿಂದೆ ಗುಪ್ತಚರ ದಳದ ಅಧಿಕಾರಿ ಅಂಕಿತ್​ ಶರ್ಮಾ ಅವರ ಮೃತದೇಹವೂ ಮೋರಿಯಲ್ಲಿಯೇ ಸಿಕ್ಕಿತ್ತು. ಅದೂ ಅವರು ನಾಪತ್ತೆಯಾಗಿ ನಾಲ್ಕು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದರು.

ದೆಹಲಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಒಟ್ಟು 885 ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು 167 ಮಂದಿ ಎಫ್​ಐಆರ್​ ದಾಖಲಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net