ಅಮ್ಮನ ತಿಥಿ ಕಾರ್ಯ ಮುಗಿಸಿದ ಕೆಲವೇ ಗಂಟೆಗಳಲ್ಲಿ ಬಾರದ ಲೋಕಕ್ಕೆ ಹೋದ ಮಕ್ಕಳಿಬ್ಬರು!

Death 5 May 20
Published on

ಪಡುಬಿದ್ರಿ: ಕಳೆದ ವಾರ ಅಸುನೀಗಿದ್ದ ಹೆತ್ತಮ್ಮನ 11ನೇ ದಿನದ ತಿಥಿ ಕಾರ್ಯ ನೆರವೇರಿಸದ ಮಕ್ಕಳ ಪೈಕಿ ಇಬ್ಬರು ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪಡುಬಿದ್ರಿ ದುರ್ಗಾದೇವಿ ಭಜನಾ ಮಂದಿರ ಬಳಿಯ ದಿ.ವೆಂಕಟರಾಯ ಆಚಾರ್ಯ ಅವರ ಪತ್ನಿ ವಾರಿಜಾ ಆಚಾರ್ಯ(80) ನಿಧನ ಹೊಂದಿದ್ದು, ಬುಧವಾರ 11ನೇ ದಿನದ ಕರ್ಮಗಳನ್ನು ಮೂವರು ಪುತ್ರರು ಸೇರಿ ನೆರವೇರಿಸಿದ್ದರು.

ವಾರಿಜಾ ಆಚಾರ್ಯ ಅವರ ತಿಥಿ ಕಾರ್ಯ ಮುಗಿದ ಬಳಿಕ ಹಿರಿಯ ಪುತ್ರ ಉದಯ ಆಚಾರ್ಯ(55) ಮಧ್ಯಾಹ್ನದ ಊಟ ಮುಗಿಸಿ ಸಂಜೆ 4 ಗಂಟೆ ಸುಮಾರಿಗೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆ ದಿನವೇ ತಡರಾತ್ರಿ ಎರಡೂವರೆ ಗಂಟೆ ಸುಮಾರಿಗೆ ಮತ್ತೋರ್ವ ಮಗ ವಿಶು ಆಚಾರ್ಯ (45) ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಉಡುಪಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿಶು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದರು. ಓರ್ವರದ್ದು ಗುರುವಾರ, ಮತ್ತೋರ್ವರ ಅಂತ್ಯಕ್ರಿಯೆ ಶುಕ್ರವಾರ ಪಡುಬಿದ್ರಿಯಲ್ಲಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net