

ಭದ್ರಾವತಿ: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಅಂತರಗಂಗೆ ಗ್ರಾಮದ ಎಸ್.ಷಣ್ಮುಖಪ್ಪ ಎಂಬುವವರು ಜೂನ್ ತಿಂಗಳಲ್ಲಿ ಕಳುವಾಗಿದ್ದ ಬೈಕ್ ಹುಡುಕಿಕೊಡುವಂತೆ ಸಲ್ಲಿಸಿದ್ದ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ನ.28ರಂದು ಚಿಕ್ಕಮಗಳೂರಿನ ಎಂ.ಬಿ.ನವೀನ್ (32), ತಾಲೂಕಿನ ವೀರಾಪುರ ಗ್ರಾಮದ ಉಮರ್ ಬೇಗ್(26) ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರು ತಾಲೂಕಿನಲ್ಲಿ 10 ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿ ನವೀನ್ ಕದ್ದ 10 ಬೈಕ್‌ಗಳ ಪೈಕಿ 7 ಅನ್ನು ಉಮರ್ ಬೇಗ್‌ಗೆ ಮಾರಾಟ ಮಾಡಿದ್ದಾನೆ. ಆರೋಪಿಗಳಿಂದ 55 ಸಾವಿರ ರೂ. ಮೌಲ್ಯದ ಒಟ್ಟು 3 ದ್ವಿಚಕ್ರ ವಾಹನಗಳು, 7 ದ್ವಿಚಕ್ರ ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡಿ ಗಳಿಸಿದ್ದ 2.10 ಲಕ್ಷ ರೂ. ನಗದು, ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ್ದ 60 ಸಾವಿರ ರೂ. ಮೌಲ್ಯದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ. ಪಿಎಸ್‌ಐ ಟಿ.ರಮೇಶ್, ಟಿ.ಪಿ.ಮಂಜಪ್ಪ, ಸಿಬ್ಬಂದಿ ನವೀನ್, ಪ್ರಸನ್ನ, ರಘು ಕಾರ್ಯಾಚರಣೆಯಲ್ಲಿದ್ದರು.