ಲಾರಿ ಮತ್ತು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಮೂವರು ಯುವಕರು ದುರ್ಮರಣ

Untitled design - 2023-10-01T155702.979
Published on

ಶಿವಮೊಗ್ಗ: ಲಾರಿ ಮತ್ತು ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಯುವಕರು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಲ್ಲಿಹಾಳ್-ಅರಹತೊಳಲು ಬಳಿ ಸಂಭವಿಸಿದೆ.

ಲಾರಿಯನ್ನು ಓವರ್​ಟೇಕ್​ ಮಾಡಲು ಹೋದ ಮೂವರಿದ್ದ ಬೈಕ್​, ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್​ಗೆ ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಯುವಕರು ಲಾರಿಯ ಚಕ್ರದ ಕೆಳಗೆ ಸಿಲುಕಿ, ಮೃತಪಟ್ಟಿದ್ದಾರೆ.

ಗುರುತು ಸಿಗದಂತೆ ದೇಹಗಳು ಛಿದ್ರಗೊಂಡಿದೆ. ಘಟನಾ ಸ್ಥಳದಿಂದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಭದ್ರಾವತಿ ತಾಲೂಕಿನ ಅರದೊಟ್ಲು ಗ್ರಾಮದ ಗಗನ್‌ ಅಪಘಾತಕ್ಕೆ ಸಿಲುಕಿ, ತಮ್ಮ ಕೈ-ಕಾಲು ಕಳೆದುಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೈಮರದಿಂದ ಕಲ್ಲಿಹಾಳ್ ಕಡೆಗೆ ತೆರಳುತ್ತಿದ್ದ ಗಗನ್​ಗೆ ಎದುರಿನಿಂದ ಬರುತ್ತಿದ್ದ ಮೂವರಿದ್ದ ಬೈಕ್, ಲಾರಿ ಓವರ್‌ಟೆಕ್‌ ಮಾಡುವ ಭರದಲ್ಲಿ ಡಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣಕ್ಕೆ ಸಿಗದೆ ಲಾರಿ ಅಡಿಗೆ ಬೈಕ್​ಗಳು ಸಿಲುಕಿದ ಕಾರಣ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ಸಂಭವಿಸಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net