ಕನ್ನಡದಲ್ಲೇ ಟ್ವಿಟರ್​ ಕೇಳ್ತು ಏನ್​ ಸಮಾಚಾರ ಅಂತ: ನಮ್ಮ ಕನ್ನಡಿಗರು ಏನಂತ ಪ್ರತಿಕ್ರಿಯಿಸಿದರು ಗೊತ್ತಾ?

Twitter
Published on

ನವದೆಹಲಿ: ಏನ್​ ಸಮಾಚಾರ ರೀ.. ಎಲ್ರೂ ಹೇಗಿದ್ದೀರಿ.. ನಮ್ದೇನು ಇಲ್ಲಾ ರೀ... ಎಲ್ಲ ನಿಮ್ದೇ ಎಲ್ಲ ರೀ... ಅಯ್ಯೋ ಇದು ಯಶ್​ ಅವರ ಹಾಡಲ್ವೇ ಈಗೇಕೆ ಇದರ ವಿಚಾರ ಅಂತಿರಾ? ವಿಚಾರ ಇದೆ. ಏಕೆಂದರೆ ಟ್ವಿಟರ್​ ಇಂಡಿಯಾ ಮಾಡಿರುವ ಟ್ವೀಟ್​ಗೂ ನಮ್ಮ ಕನ್ನಡಿಗರು ಪ್ರತಿಕ್ರಿಯಿಸಿರುವ ರೀತಿಗೂ, ಈ ಹಾಡಿಗೂ ಒಂದು ರೀತಿಯ ಕನೆಕ್ಷನ್​ ಇದೆ. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ...

ಮಂಗಳವಾರ ಮಧ್ಯಾಹ್ನ ಟ್ವಿಟರ್​ ಇಂಡಿಯಾ ಕನ್ನಡಿಗರಿಗೆ ಸರ್ಪ್ರೈಸ್​ ಒಂದನ್ನು ನೀಡಿದೆ. ಅದೇನೆಂದರೆ ಕನ್ನಡದಲ್ಲೇ ಏನ್​ ಸಮಾಚಾರ? ಎಂದು ಟ್ವೀಟ್​ ಮಾಡಿದೆ. ಸಮಾಚಾರ ಕೇಳಿದ್ದೇ ತಡ ನಮ್ಮ ಕನ್ನಡಿಗರು ಬಿಡ್ತಾರಾ ಇರೋ ಬರೋ ಸಮಾಚಾರವನ್ನೆಲ್ಲಾ ಟ್ವಿಟರ್​ ಇಂಡಿಯಾ ಮುಂದೆ ಒದರಿ, ನಮ್ಮ ಸಮಾಚಾರ ಹೀಗಿದೆ... ನಿಮ್ದೇನು ಹೇಳಿ ಸ್ವಲ್ಪ ಕೇಳುವಾ ಎಂದಿದ್ದಾರೆ.

ಅಂದಹಾಗೆ ನಮ್ಮ ಕನ್ನಡಿಗರು ಯಾವೆಲ್ಲಾ ಸಮಾಚಾರಗಳನ್ನು ಹೇಳಿದ್ದರು ಎಂಬುದರ ಒಂದು ಸಣ್ಣ ಝಲಕ್​ ನೋಡಿ ಬರುವುದಾದರೆ, ನೀವ್ ಹೇಳ್ಬೇಕು..ನಾವ್ ಕೇಳ್ಬೇಕು ಎಂದು ನೆಟ್ಟಿಗನೊಬ್ಬ ಹೇಳಿದರೆ, ಮೊನ್ನೆ ಡಿ ಬಾಸ್​ ಬರ್ತ್​ಡೇ ಆಯ್ತು. ನಿನ್ನೆ ಅಪ್ಪು ಸಾರ್ ನಿರ್ಮಿಸಿರುವ "ಮಾಯಾಬಜಾ಼ರ್" ಚಿತ್ರದ ಟೀಸರ್ ರಿಲೀಸ್ ಆಯ್ತು. ಇಂದು ರಾಷ್ಟ್ರೀಯ ಪೋಷಕ ನಟಿ ಕಿಶೋರಿ ಬಲ್ಲಾಳ್ ರವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ನಾಳೆ "ಶಿವಣ್ಣ" ನವರ ಹೊಸ ಚಿತ್ರದ ಮುಹೂರ್ತ ಇದೆ. ಫೆ. 21 "ಕೋಟಿಗೊಬ್ಬ 3" ಟೀಸರ್ ಬಿಡುಗಡೆಯಾಗಲಿದೆ. ಅಂದಹಾಗೆ ನೀವು ಅವತಾರಪುರುಷ ಟೀಸರ್ ನೋಡುದ್ರಾ ಮತ್ತೆ ನಿಮ್ದೇನ್ ಸಮಾಚಾರ? ಎಂದು ಮತ್ತೊಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದಾರೆ. ಇನ್ನೊರ್ವ ಅಸೆಂಬ್ಲಿಲಿ ಪೋರ್ನ್ ನೋಡಿದವರೆಲ್ಲ ಮಿನಿಸ್ಟರ್ ಆಗ್ ಬಿಟ್ಟಿದ್ದಾರೆ ಸಾರ್ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಹೀಗೆ ನಾನಾ ರೀತಿಯಲ್ಲಿ ಟ್ವಿಟರ್​ ಇಂಡಿಯಾಗೆ ಕನ್ನಡಿಗರು ಪ್ರತಿಕ್ರಿಯೆ ನೀಡಿದ್ದು, ಅದರಲ್ಲಿ ಹಾಸ್ಯ, ವ್ಯಾಂಗ್ಯ ಮತ್ತು ಟೀಕೆಗಳು ಸುರಿಮಳೆಯೇ ಸುರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net