

ನ್ಯೂಯಾರ್ಕ್: ವಾಣಿಜ್ಯ ಮತ್ತು ಸರ್ಕಾರಿ ಬಳಕೆದಾರರಿಗೆ ಸಾಂಕೇತಿಕ ಶುಲ್ಕ ವಿಧಿಸಲಾಗುವುದೆಂದು ಟ್ವಿಟರ್ ಮಾಲೀಕ ಎಲನ್ ಮಸ್ಕ್ ಹೇಳಿದ್ದಾರೆ. ಆದರೆ ಸಾಮಾನ್ಯ ಬಳಕೆದಾರರಿಗೆ ಉಚಿತವಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೇಕ್ರೋಬ್ಲಾಗಿಂಗ್ ವೇದಿಕೆ ಟ್ವಿಟರ್ನ್ನು 3,365 ಕೋಟಿ ರೂಪಾಯಿಗೆ ಮಸ್ಕ್ ಖರೀದಿಸಿದ್ದಾರೆ. ಹೊಸ ಫೀಚರ್ಗಳ ಸೇರ್ಪಡೆಯೊಂದಿಗೆ ಹಲವಾರು ಬದಲಾವಣೆಗಳನ್ನು ತರಲು ಅವರು ಯೋಜಿಸಿದ್ದಾರೆ. ನ್ಯೂಯಾರ್ಕ್ನಲ್ಲಿ ನಡೆದಿದ್ದ ವಾರ್ಷಿಕ ಮೆಟ್ ಗಲಾದಲ್ಲಿ ಮಾತನಾಡಿದ ಮಸ್ಕ್, ಟ್ವಿಟರ್ಅನ್ನು ಪಾರದರ್ಶಕಗೊಳಿಸುವ ಆಶಯ ವ್ಯಕ್ತಪಡಿಸಿದ್ದರು. ಈ ನಡುವೆ, ಟ್ವೀಟ್ಗಳಲ್ಲಿ ಆಗಿರುವ ತಪು$್ಪಗಳನ್ನು ತಿದ್ದಲು ಬಳಕೆದಾರರಿಗೆ ಅನುಕೂಲವಾಗುವಂತೆ ಎಡಿಟ್ ಬಟನ್ ಪರಿಚಯಿಸಲು ಟ್ವಿಟರ್ ಯೋಜಿಸುತ್ತಿದೆ.