ಕೆತನ್ ಕೊಲೆ ಕೇಸ್‌ಗೆ ಟ್ವಿಸ್ಟ್: ಹಾರ ಹಾಕಿಕೊಂಡ ಫೋಟೋದಲ್ಲಿ ಸೀಕ್ರೆಟ್ ಮದುವೆ ಸುಳಿವು! | Pune Murder Case

ಪುಣೆ ಕೆತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ರಹಸ್ಯವಾಗಿ ಮದುವೆಯಾಗಿದ್ದರಾ ಎಂಬ ಅನುಮಾನ ಮೂಡಿದೆ. ಹಾರ ಹಾಕಿಕೊಂಡಿರುವ ಫೋಟೋ ಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Pune Ketan Agarwal Murder
ಹೂವಿನ ಹಾರ ಹಾಕಿಕೊಂಡಿರುವ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ
Published on
Summary

ಕೆತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಹೊಸ ತಿರುವು

ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ರಹಸ್ಯವಾಗಿ ಮದುವೆ?

ಇಬ್ಬರೂ ಹೂವಿನ ಹಾರ ಹಾಕಿಕೊಂಡ ಫೋಟೋ ಮೊಬೈಲ್‌ನಲ್ಲಿ ಪತ್ತೆ

Pune Ketan Agarwal Murder: ಕೆತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯಲ್ಲಿ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ರಹಸ್ಯವಾಗಿ ಮದುವೆಯಾಗಿದ್ದರಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, 2025ರ ಡಿಸೆಂಬರ್‌ನಲ್ಲಿ ರಾಜಸ್ಥಾನದ ಖಾಟು ಶ್ಯಾಮ್ ದೇವಸ್ಥಾನದಲ್ಲಿ ಸಿಯಾ ಮತ್ತು ಚೇತನ್ ರಹಸ್ಯವಾಗಿ ಮದುವೆಯಾಗಿದ್ದರಾ ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ಇಬ್ಬರ ಮೊಬೈಲ್ ಚಾಟ್‌ಗಳನ್ನು ಪರಿಶೀಲಿಸಿದ ಬಳಿಕ ಈ ಶಂಕೆ ಮೂಡಿದ್ದು, ತನಿಖೆಗಾಗಿ ವಿಶೇಷ ತಂಡ ರಾಜಸ್ಥಾನಕ್ಕೂ ತೆರಳಿತ್ತು.

ಹಾರ ಹಾಕಿಕೊಂಡ ಫೋಟೋ ಪತ್ತೆ

ತನಿಖೆ ವೇಳೆ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಹೂವಿನ ಹಾರ ಹಾಕಿಕೊಂಡಿರುವ ಫೋಟೋ ಮೊಬೈಲ್‌ನಲ್ಲಿ ಸಿಕ್ಕಿದೆ. ಪೊಲೀಸರು ಈ ಫೋಟೋವನ್ನು ಚಾರ್ಜ್‌ಶೀಟ್‌ನಲ್ಲೂ ಸಾಕ್ಷ್ಯವಾಗಿ ಸೇರಿಸಿದ್ದಾರೆ. ಕೆತನ್ ಜೊತೆ ಸಿಯಾ ಮದುವೆಗೂ ಮುನ್ನವೇ ಇವರಿಬ್ಬರು ಮದುವೆಯಾಗಿದ್ದರಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Ketan Agarwal murder case
ಕೆತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್

ರಾಜಸ್ಥಾನಕ್ಕೆ ತೆರಳಿದ್ದ ವಿಶೇಷ ತಂಡ

ರಹಸ್ಯ ಮದುವೆಯ ಅನುಮಾನ ಹಿನ್ನೆಲೆಯಲ್ಲಿ ಪುಣೆ ಗ್ರಾಮೀಣ ಪೊಲೀಸರ ವಿಶೇಷ ತಂಡ ಜುಲೈನಲ್ಲಿ ರಾಜಸ್ಥಾನಕ್ಕೆ ತೆರಳಿ ಖಾಟು ಶ್ಯಾಮ್ ದೇವಸ್ಥಾನದಲ್ಲಿ ಪರಿಶೀಲನೆ ನಡೆಸಿತ್ತು. ಆದರೆ ಈವರೆಗೆ ಮದುವೆಯ ಅಧಿಕೃತ ದಾಖಲೆ ಅಥವಾ ಸಿಸಿಟಿವಿ ದೃಶ್ಯ ಸಿಕ್ಕಿಲ್ಲ.

ಏನಿದು ಕೆತನ್ ಅಗರ್ವಾಲ್ ಕೊಲೆ ಪ್ರಕರಣ?

ಜೂನ್ 18ರಂದು ಕೆತನ್ ಅಗರ್ವಾಲ್ ಅವರನ್ನು ಲೋಹಗಢ ಕೋಟೆಯಿಂದ ಕೆಳಗೆ ತಳ್ಳಲಾಗಿತ್ತು. ಬಳಿಕ ಅವರ ನಿಶ್ಚಿತಾರ್ಥವಾಗಿದ್ದ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಹಾರ ಹಾಕಿಕೊಂಡಿರುವ ಫೋಟೋ, ಮೊಬೈಲ್ ಚಾಟ್‌ಗಳು ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ

ಇದನ್ನೂ ಓದಿ: ಕೋಚಿಂಗ್ ಮುಗಿಸಿ ವಾಪಸ್‌ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಕಿರುಕುಳ; ವಿಡಿಯೋ ವೈರಲ್‌, ಇಬ್ಬರು ವಶಕ್ಕೆ! | Harassment of students

ಆದರೆ ಖಾಟು ಶ್ಯಾಮ್ ದೇವಸ್ಥಾನದಲ್ಲೇ ಸಿಯಾ ಮತ್ತು ಚೇತನ್ ಮದುವೆಯಾಗಿದ್ದರು ಎಂಬುದಕ್ಕೆ ಪೂರಕವಾದ ಅಧಿಕೃತ ದಾಖಲೆ ಅಥವಾ ಸಿಸಿಟಿವಿ ಸಾಕ್ಷ್ಯ ಈವರೆಗೆ ಸಿಕ್ಕಿಲ್ಲ. ಹೀಗಾಗಿ ರಹಸ್ಯ ಮದುವೆಯ ವಿಚಾರದ ಬಗ್ಗೆ ತನಿಖೆ ಮುಂದುವರಿದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net