ಬಾಲ್ಯದಿಂದಲೂ ಒಟ್ಟಿಗೆ ಬೆಳೆದ ಅವಳಿ ಸಹೋದರಿಯರು ಒಬ್ಬನನ್ನೇ ಮದ್ವೆಯಾಗ್ತಾರಂತೆ! Twins Love Story

twins
Published on

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ  20 ವರ್ಷದ ಏಪ್ರಿಲ್ ಮತ್ತು ಅಮೆಲಿಯಾ ಮ್ಯಾಡಿಸನ್ ಎನ್ನುವ ಅವಳಿ ಸಹೋದರಿಯರು ಒಬ್ಬನನ್ನೇ ಮದುವೆಯಾಗುವ ( Twins Love Story ) ಇಚ್ಚೆ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗುತ್ತಿದೆ.

ಏಪ್ರಿಲ್ ಮತ್ತು ಅಮೆಲಿಯಾ ಬಾಲ್ಯದಲ್ಲಿ ಬಾರ್ಬಿ ಡಾಲ್​, ಬೈಸಿಕಲ್​, ಬಟ್ಟೆ ಮತ್ತು ಮೇಕಪ್​ ಎಲ್ಲವನ್ನೂ ಹಂಚಿಕೊಂಡಿದ್ದಾರಂತೆ. ಈಗ ಇಬ್ಬರೂ ಒಬನನ್ನೇ ಸಂಗಾತಿಯಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

 ಅವಳಿ ಸಹೋದರಿಯರು ಮಾತನಾಡಿ,  ನಾವಿಬ್ಬರೂ ಒಂದೇ ಹುಡುಗನನ್ನು ಇಷ್ಟಪಡುತ್ತೇವೆ. ಅವನು ಎತ್ತರ, ಹ್ಯಾಂಡ್ಸಮ್ ಆಗಿರಬೇಕು ಮತ್ತು ಉತ್ತಮ ಹಾಸ್ಯ ಪ್ರಜ್ಞೆ ಹೊಂದಿರಬೇಕು ಅಂತಾರೆ. ಬೇರೆ ಬೇರೆ ಬಾಯ್‌ಫ್ರೆಂಡ್‌ ಹೊಂದಿದ್ರೆ ಸಮಸ್ಯೆ, ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಬಾಂಧವ್ಯವಿದೆ. ನಾವು ಪ್ರತ್ಯೇಕ ಗೆಳೆಯರನ್ನು ಹೊಂದಲು ಪ್ರಯತ್ನಿಸಿದೆವು. ಆದರೆ ನಮ್ಮ ಬಾಂಧವ್ಯ ನೋಡಿ ಬಾಯ್​​ಫ್ರೆಂಡ್​​ ಗಳು ಅಸೂಯೆಪಟ್ಟರು. ಈ ಸಮಸ್ಯೆಯನ್ನು ಪರಿಹರಿಸಲು, ಸಹೋದರಿಯರಿಬ್ಬರೂ ಈಗ ಒಬ್ಬನೇ ಗೆಳೆಯನನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ, ಇದರಿಂದ ಅವರ ಬಾಂಧವ್ಯದಲ್ಲಿ ಯಾವುದೇ ತೊಂದರೆಯಾಗುವುದಿಲ್ಲವಂತೆ.

ಒಬ್ಬನೇ ಬಾಯ್​ಫ್ರೆಂಡ್ ಇದ್ದರೆ ನಾವು ಮೂವರೂ ಒಟ್ಟಿಗೆ ಸಮಯ ಕಳೆಯಬಹುದು, ತಿರುಗಾಡಬಹುದು ಮತ್ತು ಮಾತನಾಡಬಹುದು, ಇದರಿಂದ ಯಾರಿಗೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಅಂತಾರೆ ಅವಳಿ ಸಹೋದರಿಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net