ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ! ಮದುವೆಯಾದ ಒಂದೇ ವರ್ಷದಲ್ಲಿ ಡಿವೋರ್ಸ್​​ ಕೊಟ್ಟ ನಟಿ

jennifer (1)
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಪ್ರೀತಿ, ಮದುವೆ, ವಿಚ್ಛೇದನ ಎಂಬುದೇ ಸದ್ದು ಮಾಡುತ್ತಿದೆ. ತೆರೆಯ ಮೇಲೆ ತನಗೊಂದು ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದ ನಟಿ ನಿಜ ಜೀವನದಲ್ಲಿ ಹಲವು ಏಳುಬೀಳುಗಳನ್ನು ಎದುರಿಸಿದ್ದಾರೆ. ಕಲರ್ ಫುಲ್ ಲೋಕದಲ್ಲಿ ಸ್ಟಾರ್ ನಟಿಯಾಗಿ ಮೆರೆದ ಅದೇ ಸಮಯಕ್ಕೆ ಅವರ ವೈಯಕ್ತಿಕ ಬದುಕಿನಲ್ಲೂ ಕಷ್ಟಗಳನ್ನು ನೋಡಿಕೊಂಡು ಬಂದಿದ್ದ ನಟಿ ಕುರಿತಾಗಿ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ಚೆಲುವೆ ಜೆನ್ನಿಫರ್ ವಿಂಗೆಟ್. ತನ್ನ ಅದ್ಭುತ ಅಭಿನಯದಿಂದ ಪ್ರೇಕ್ಷಕರ ಮನ ಕದ್ದಿದ್ದಾಳೆ. ಜೆನ್ನಿಫರ್ ಅವರ ಸ್ಟೈಲ್, ನಟನೆ, ವರ್ತನೆ ಮತ್ತು ಮ್ಯಾನರಿಸಂಗೆ ಪ್ರೇಕ್ಷಕರು ಮುಗಿಬಿದ್ದರು. ಬೇಹದ್ ಧಾರಾವಾಹಿಯಲ್ಲಿ ಅವರ ಪಾತ್ರವನ್ನು ಜನರು ಎಂದಿಗೂ ಮರೆಯುವುದಿಲ್ಲ.ಹಿಂದಿಯಲ್ಲಿ ದಿಲ್ ಮಿಲ್ ಗಯೆ, ಬೇಹದ್, ಕಹಿನ್ ತೊ ಹೋಗಾ, ಬೇಪನ್ನಾ ಮುಂತಾದ ಧಾರಾವಾಹಿಗಳ ಮೂಲಕ ಹೆಚ್ಚು ಜನಪ್ರಿಯಳಾದಳು. ನಟಿಯಾಗಿ ಬಹಳ ಫೇಮಸ್ ಆಗಿರುವ ಜೆನ್ನಿಫರ್ ತಮ್ಮ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ.

ಜೆನ್ನಿಫರ್ ವಿಂಗೆಟ್ ಚಿಕ್ಕ ವಯಸ್ಸಿನಲ್ಲೇ ನಟ ಕರಣ್ ಸಿಂಗ್ ಗ್ರೋವರ್ ಅವರನ್ನು ವಿವಾಹವಾದರು. ಧಾರಾವಾಹಿ ಶೂಟಿಂಗ್ ಮೂಲಕ ಇಬ್ಬರೂ ಭೇಟಿಯಾಗಿದ್ದರು. ಬಳಿಕ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾದರು. ಪ್ರೀತಿಸಿ ಮದುವೆಯಾಗಿದ್ದ ಜೆನ್ನಿಫರ್ ಪತಿಯಿಂದ ಮೋಸ ಹೋಗಿದ್ದು.. ಆತನಿಗೆ ಬೇರೊಬ್ಬ ನಟಿ ಜೊತೆ ರಿಲೇಶನ್ ಶಿಪ್ ಇದೆ ಎಂದು ತಿಳಿದು ಬಂದಾಗ. ಗಂಡನ ಗರ್ಲ್ ಫ್ರೆಂಡ್ ಜೊತೆ ತಮಾಷೆ ಮಾಡುತ್ತಾ ಸೆಟ್ ನಲ್ಲಿದ್ದಾಗ ಎಲ್ಲರ ಸಮ್ಮುಖದಲ್ಲೇ ಜೆನ್ನಿಫರ್ ವಿಂಗೆಟ್  ಹೊಡೆದಿದ್ದಾಳೆ. ಈ ಸುದ್ದಿ ಆ ಸಮಯದಲ್ಲಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು.

ರಣ್ ಸಿಂಗ್ ತನಗೆ ಮೋಸ ಮಾಡಿದ್ದಾನೆಂದು ತಿಳಿದ ನಂತರ, ಅವಳು ತೀವ್ರ ಭಾವನಾತ್ಮಕ ದುಃಖದಲ್ಲಿದ್ದಳು. 10 ತಿಂಗಳಲ್ಲೇ ಪತಿಗೆ ವಿಚ್ಛೇದನ ನೀಡಿದ್ದಾಳೆ. ಗಂಡನಿಗೆ ಬೇರೆ ಹುಡುಗಿಯ ಜತೆ ಸಂಬಂಧವಿದೆ ಎಂದು ತಿಳಿದಾಗ ಎಲ್ಲರ ಮುಂದೆ ಕಪಾಳಮೋಕ್ಷ ಮಾಡಿದ್ದಾಳೆ. ಮದುವೆಯಾದ ಒಂದೇ ವರ್ಷದಲ್ಲಿ ವಿಚ್ಛೇದನ ಪಡೆದರು.  ಜೆನ್ನಿಫರ್ 2014 ರಲ್ಲಿ ತನ್ನ ಪತಿಯಿಂದ ಬೇರ್ಪಟ್ಟರು ಮತ್ತು ಇನ್ನೂ ಒಂಟಿಯಾಗಿ ವಾಸಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net