

ಅಮೆರಿಕ: ಜಿಮ್‌ಗೆ ನರ ಮನುಷ್ಯರು ಫಿಟ್ ಆಗಿರಲು ಹೋಗುವುದನ್ನು ಕೇಳಿದ್ದೇವೆ. ಆದರೆ ಇದೆ ಮೊದಲ ಬಾರಿಗೆ ಆಮೆಯೊಂದು ಜಿಮ್‌ಗೆ ಎಂಟ್ರಿ ಕೊಟ್ಟಿದೆ. ಈ ಆಮೆ ಯಾಕೆ ಜಿಮ್‌ಗೆ ಬರುತ್ತದೆ ಎಂದು ಯೋಚನೆ ಮಾಡುತ್ತಾ ಇದ್ದೀರಾ? ಹಾಗಿದ್ರೆ ಈ ವಿಡಿಯೋವನ್ನು ನೀವು ನೋಡಲೇ ಬೇಕು.
ಫ್ಲೋರಿಡಾದ ಪೋರ್ಟ್ ಸೇಂಟ್ ಲೂಸಿಯಲ್ಲಿರುವ ಜಿಮ್‌ಗೆ ಈ ಆಮೆ ಬಂದಿದೆ. ಜಿಮ್ನ ಮ್ಯಾನೇಜರ್ ಆಮೆಯನ್ನು ನೋಡಿ ಅಚ್ಚರಿಗೆ ಒಳಗಾಗಿದ್ದಾಳೆ. ಜಿಮ್ ತುಂಬ ಮೆಲ್ಲಗೆ ಓಡಾಡುತ್ತ ಆಕೆಯನ್ನು ಸರಿಯಾಗಿ ವ್ಯಾಯಾಮವನ್ನೂ ಮಾಡಿಸಿದೆ.
ಆಕೆ ಅದನ್ನು ಪುಟ್ಟ ಟವೆಲ್ನಿಂದ ಹಿಡಿಯಲು ಪ್ರಯತ್ನಿಸಿದ್ದಾಳೆ. ಆಕೆಯ ಕಾಟವನ್ನು ತಡೆಯಲಾರದೆ ಬೇಸತ್ತು ತಂತಾನೇ ಜಿಮ್ನ ಗ್ಯಾರೇಜ್ನ ಬಾಗಿಲಿನಿಂದ ಹೊರಹೋಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕವಾಗಿ ತಮಾಷೆ ಮಾಡುತ್ತಿದ್ದಾರೆ.