ಟರ್ಕಿಯಲ್ಲಿ ನಾಲ್ಕನೇ ಬಾರಿ ಕಂಪಿಸಿದ ಭೂಮಿ! ಏರುತ್ತಿದೆ ಮೃತರ ಸಂಖ್ಯೆ…

turkey 4
Published on

ಇಸ್ತಾನ್​ಬುಲ್​: ನಿನ್ನೆಯಷ್ಟೇ ಟರ್ಕಿ ಮತ್ತು ಸಿರಿಯಾದಲ್ಲಿ ಮೂರು ವಿನಾಶಕಾರಿ ಭೂಕಂಪಗಳು 4,000 ಕ್ಕೂ ಹೆಚ್ಚು ಜನರನ್ನು ಬಲಿ ಪಙಡೆದಿತ್ತು. ಇದಾದ ಕೆಲವೇ ಗಂಟೆಗಳ ನಂತರ, ಇದೀಗ ಮಧ್ಯ ಟರ್ಕಿ ಪ್ರದೇಶದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ಸಾವಿರಾರು ಮಂದಿ ಗಾಯಗೊಂಡಿದ್ದು, ಬದುಕುಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ. ಇ ನಡುವೆ ಭೂಕಂಪ ಪೀಡಿತ ಟರ್ಕಿ ಹಾಗೂ ಸಿರಿಯಾಗೆ ಭಾರತ ಸೇರಿದಂತೆ ಹಲವು ದೇಶಗಳು ಆಹಾರ, ವೈದ್ಯಕೀಯ ಸಲಕರಣೆಗಳು, ಹೀಗೆ ಅಗತ್ಯ ವಸ್ತುಗಳ ಸರಬರಾಜು ಮಾಡುತ್ತಿದ್ದು ಮತ್ತು ರಕ್ಷಣಾ ತಂಡಗಳನ್ನು ಕಳುಹಿಸುತ್ತಿವೆ.

ರಕ್ಷಣಾ ತಂಡಗಳು ಅವಶೇಷಗಳಡಿ ಶೋಧ ನಡೆಸುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಮೊದಲ ಭೂಕಂಪದ ಕೇಂದ್ರಬಿಂದು ಸಿರಿಯಾದ ಗಡಿಯಾದ ಗಾಜಿಯಾಂಟೆಪ್ ಪ್ರಾಂತ್ಯದ ನೂರ್ಡಗಿ ಬಳಿ ಇತ್ತು. ಇನ್ನೆರಡು ಭೂಕಂಪಗಳು ಸಮೀಪದ ಕಹ್ರಮನ್ಮಾರಾಸ್ ಪ್ರಾಂತ್ಯದಲ್ಲಿ ಸಂಭವಿಸಿವೆ. ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಈ ಸಮಯದಲ್ಲಿ ಟರ್ಕಿಯ ಧ್ವಜಗಳು ರಾಷ್ಟ್ರದಾದ್ಯಂತ ಮತ್ತು ವಿದೇಶದಲ್ಲಿರುವ ಎಂಬಸಿಗಳಲ್ಲಿ ಅರ್ಧ ಎತ್ತರದಲ್ಲಿ ಹಾರಲಿವೆ.

ಭಾರತದಿಂದ NDRF ಹುಡುಕಾಟ ಮತ್ತು ರಕ್ಷಣಾ ತಂಡಗಳು, ವಿಶೇಷವಾಗಿ ತರಬೇತಿ ಪಡೆದ ಶ್ವಾನಪಡೆ, ವೈದ್ಯಕೀಯ ಸರಬರಾಜುಗಳು, ಡ್ರಿಲ್ಲಿಂಗ್ ಯಂತ್ರಗಳು ಮತ್ತು ಇತರ ಉಪಕರಣಗಳು ಇಂದು ಮುಂಜಾನೆ ಟರ್ಕಿಗೆ ತೆರಳಿವೆ. ಭೂಕಂಪ ಪೀಡಿತ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನೆರವು ಕಳಿಸಿದ ಕೆಲವೇ ಗಂಟೆಗಳಲ್ಲಿ ಇದು ನಡೆದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net