20ನೇ ವಯಸ್ಸಿಗೇ ಇಷ್ಟೊಂದು ಆಸ್ತಿ ಮಾಡಿದ್ದಳು ನಟಿ ತುನಿಷಾ!

Tunisha
Published on

ಮುಂಬೈ: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡು ದೇಶದಲ್ಲಿ ತಲ್ಲಣ ಸೃಷ್ಟಿಸಿದ್ದ ಜನಪ್ರಿಯ ಕಿರುತೆರೆ ನಟಿ ತುನಿಷಾ ಶರ್ಮಾ, ಕೇವಲ 20 ವರ್ಷ ವಯಸ್ಸಿನವರಾಗಿದ್ದರು. ಅವರು ಡಿಸೆಂಬರ್ 24 ರಂದು ಅಲಿ ಬಾಬಾ: ದಸ್ತಾನ್-ಎ-ಕಾಬೂಲ್ ಟಿವಿ ಕಾರ್ಯಕ್ರಮದ ಸೆಟ್‌ಗಳಲ್ಲಿ ಶವವಾಗಿ ಪತ್ತೆಯಾಗಿದ್ದು ಎಲ್ಲರನ್ನೂ ಆಘಾತಕ್ಕೆ ತಳ್ಳಿದ್ದರು. ಆದರೆ ಈಕೆ ತನ್ನ ತಾಯಿಗಾಗಿ ಮಾಡಿರುವ ಆಸ್ತಿಯ ಪ್ರಮಾಣ ಕೇಳಿದರೆ ಆಶ್ಚರ್ಯಕ್ಕೆ ಒಳಗಾಗೋದು ಪಕ್ಕಾ.

ಮಗಳ ಸಾವಿನ ನಂತರ ಆಕೆಯ ತಾಯಿ ಸಂಪೂರ್ಣವಾಗಿ ಎದೆಗುಂದಿದ್ದಾರೆ. ಇದೀಗ ನಟಿ ತನ್ನ ತಾಯಿಗಾಗಿ ಮುಂಬೈನಲ್ಲಿ 15 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಬಿಟ್ಟು ಹೋಗಿದ್ದಾರೆ.

ಈ ಮಧ್ಯೆ, ತನ್ನ ತುನೀಷಾ ಶರ್ಮಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಸಹ-ನಟ ಶೀಜನ್ ಖಾನ್ ಅವರು ಹಲವಾರು ಹುಡುಗಿಯರೊಂದಿಗೆ ಡೇಟಿಂಗ್ ನಡೆಸುತ್ತಿದ್ದರು ಎಂಬ ಆರೋಪವನ್ನು ನಿರಾಕರಿಸಿದ್ದಾರೆ.

ಮಂಗಳವಾರ, ವಲೀವ್ ಪೊಲೀಸರು, ಖಾನ್ ಪದೇ ಪದೇ ತಮ್ಮ ಹೇಳಿಕೆಗಳನ್ನು ಬದಲಾಯಿಸುತ್ತಲೇ ಇರುತ್ತಾರೆ ಮತ್ತು ಅವರು ತುನಿಷಾ ಜೊತೆ ಯಾಕೆ ಬ್ರೇಕ್​ಅಪ್​ ಮಾಡಿಕೊಂಡದ್ದು ಎನ್ನುವುದಕ್ಕೆ ಯಾವುದೇ ಸ್ಪಷ್ಟ ಕಾರಣವನ್ನು ನೀಡಿಲ್ಲ ಎಂದು ಹೇಳಿದ್ದಾರೆ.

ಶೀಜನ್ ಖಾನ್​, ತುನೀಷಾಗೆ ಮೋಸ ಮಾಡುತ್ತಿದ್ದಾನೆ ಎಂದು ಮೃತ ನಟಿಯ ತಾಯಿ ಹೇಳಿದ್ದಾರೆ. ತುನಿಷಾ ಅವರ ತಾಯಿಯ ಹೇಳಿಕೆಯ ಆಧಾರದ ಮೇಲೆ, ಎಫ್‌ಐಆರ್ ದಾಖಲಿಸಿ ಬಂಧಿಸಲಾಗಿದೆ. ಶೀಜನ್ ಕಳೆದ ಎರಡು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದು, ನಾವು ನಿರಂತರವಾಗಿ ವಿಚಾರಣೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net