ಡಾ. ಶಿವಕುಮಾರ ಶ್ರೀಗಳ ಪ್ರಥಮ ಪುಣ್ಯ ಸಂಸ್ಮರಣೋತ್ಸವ; ಗದ್ದುಗೆಗೆ ವಿಶೇಷ ಅಲಂಕಾರ, ಭಕ್ತರ ದರ್ಶನಕ್ಕೆ ಅನುವು

SIDD SRI
Published on

ತುಮಕೂರು: ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ಪ್ರಥಮ ಪುಣ್ಯ ಸಂಸ್ಮರಣೋತ್ಸವ ಅಂಗವಾಗಿ ಶ್ರೀಗಳ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಬೆಳಗಿನಿಂದ ರುದ್ರಾಭಿಷೇಕ ನೆರವೇರಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

ನಾಡಿನೆಲ್ಲೆಡೆಯಿಂದ ಭಕ್ತ ಸಾಗರ ಹರಿದು ಬರುತ್ತಿದ್ದು ಬೆಳಗಿನಿಂದಲೇ ಉಪಹಾರ ವ್ಯವಸ್ಥೆ ಮಾಡಲಾಗಿದೆ.

ಭಾವೈಕ್ಯತೆ ಸಾರಿದ ಮೆರವಣಿಗೆ

ಬೆಳ್ಳಿ ವಿಗ್ರಹ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿವೆ. ಶ್ರೀಗಳ ಗದ್ದುಗೆಯಿಂದ ಗೋಸಲವೇದಿಕೆಯವರೆಗೂ ಮೆರವಣಿಗೆ ನಡೆಯಲಿದೆ. ರಥದ ಮೇಲೆ ಶಿವಕುಮಾರ ಶ್ರೀಗಳ ಫೋಟೋ ಇಟ್ಟು ಮೆರವಣಿಗೆ.

ಮೆರವಣಿಗೆಯಲ್ಲಿ ಸಿದ್ದಗಂಗಾ ಪೀಠಾಧ್ಯಕ್ಷರ ಜತೆ ಮುಸ್ಲಿಂ ಸಮುದಾಯದ ಮೌಲ್ವಿಗಳು ಭಾಗಿಯಾಗಿವೆ. ಮಠದ ಆವರಣದಲ್ಲಿ ಕಲಾ ಪ್ರದರ್ಶನ ಆರಂಬವಾಗಲಿದೆ. ಮೆರವಣಿಗೆಯಲ್ಲಿ ವೀರಗಾಸೆ, ನಂದಿ ಕುಣಿತ ಪ್ರದರ್ಶನ ತಂಡಗಳು ಬಾಗವಹಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net