ಐವರಿಗೆ ಒಲಿದ ಪಾಲಿಕೆ ನಾಮನಿರ್ದೇಶಿತ ಸದಸ್ಯತ್ವ ಭಾಗ್ಯ

Corporation_Nominee
Published on

ತುಮಕೂರು: ಮಹಾನಗರ ಪಾಲಿಕೆಯ ಐವರು ನಾಮನಿರ್ದೇಶಿತ ಸದಸ್ಯರಾದ ಕೆ.ಎನ್.ಶಿವರಾಜು, ಡಿ.ಎ.ಮೋಹನ್, ಸಿ.ನರಸಿಂಹಸ್ವಾಮಿ, ಆರ್.ತ್ಯಾಗರಾಜಸ್ವಾಮಿ ಹಾಗೂ ಟಿ.ವಿ.ವಿಶ್ವನಾಥ್‌ರನ್ನು ಪಾಲಿಕೆ ವತಿಯಿಂದ ಸ್ವಾಗತಿಸಲಾಯಿತು.

ನಗರ ಪಾಲಿಕೆ ಸಭಾಂಗಣದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ನೂತನ ನಾಮನಿರ್ದೇಶಿತ ಸದಸ್ಯರನ್ನು ಸ್ವಾಗತಿಸಿದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ನಗರದ ಅಭಿವೃದ್ದಿಗೆ ಪೂರಕವಾಗಿ ಸರ್ಕಾರ ಪಾಲಿಕೆಗೆ ನಾಮನಿರ್ದೇಶನ ಮಾಡಿರುವ ಸದಸ್ಯರು ನಡೆದುಕೊಳ್ಳುವಂತೆ ಸಲಹೆ ನೀಡಿದರು.

ಕಳೆದ 45 ದಿನಗಳ ಹಿಂದೆಯೇ ಸರ್ಕಾರ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿತ್ತಾದರೂ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅವರನ್ನು ನಗರಪಾಲಿಕೆಗೆ ಪರಿಚಯಿಸಲು ಸಾಧ್ಯವಾಗಿರಲಿಲ್ಲ. ಚುನಾಯಿತ ಸದಸ್ಯರು, ಅಧಿಕಾರಿಗಳೊಂದಿಗೆ ಒಳ್ಳೆಯ ರೀತಿಯಲ್ಲಿ ಸಹಕಾರ, ಸಲಹೆ ನೀಡುವ ಮೂಲಕ ನಗರ ಅಭಿವೃದ್ದಿಯಲ್ಲಿ ತಮ್ಮ ಕೈಲಾದ ಸೇವೆ ಮಾಡುವಂತೆ ಸೂಚನೆ ನೀಡಿದರು.

ಮೇಯರ್ ಫರೀದಾಬೇಗಂ, ಪಾಲಿಕೆಯ ಆಯುಕ್ತೆ ರೇಣುಕಮ, ಸ್ಥಾಯಿಸಮಿತಿ ಅಧ್ಯಕ್ಷ ಎಚ್. ಮಲ್ಲಿಕಾರ್ಜುನಯ್ಯ, ಮಂಜುಳಾ, ಟಿ.ಜಿ.ಕೃಷ್ಣಪ್ಪ, ವಿಪಕ್ಷ ನಾಯಕ ಸಿ.ಎನ್.ರಮೇಶ್, ವಿಷ್ಣುವರ್ಧನ್, ಮಂಜುನಾಥ್, ಗಿರಿಜಾ , ನಿರ್ಮಲ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net